News Karnataka Kannada
Monday, April 29 2024
ಕ್ರೀಡೆ

ʼಬ್ಯಾಲನ್ ಡಿಓರ್’ ಪ್ರಶಸ್ತಿ ಗೆದ್ದ ಲಿಯೋನೆಲ್​ ಮೆಸ್ಸಿ

Lionel Messi wins Ballon d'Or
Photo Credit : Twitter

ಪ್ಯಾರಿಸ್​: ಅರ್ಜೆಂಟೀನಾ ತಂಡದ ನಾಯಕ ಲಿಯೋನೆಲ್​ ಮೆಸ್ಸಿ ಅವರು ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದಿದ್ದಾರೆ. ಇದು ಮೆಸ್ಸಿ ಗೆದ್ದ ದಾಖಲೆಯ 8ನೇ ಪ್ರಶಸ್ತಿಯಾಗಿದೆ. ಈ ಪ್ರಶಸ್ತಿ ರೇಸ್​ನಲ್ಲಿ ಮ್ಯಾಂಚೆಸ್ಟರ್ ಸಿಟಿ ತಂಡದ ಎರ್ಲಿಂಗ್ ಹಾಲೆಂಡ್ ಅವರು ಪ್ರಶಸ್ತಿ ಗೆಲ್ಲುವಲ್ಲಿ ವಿಫಲರಾಗಿದ್ದಾರೆ.

ಮೆಸ್ಸಿ ಅವರು ಈ ಹಿಂದೆ 2009, 2010, 2011, 2012, 2015, 2019 ಮತ್ತು 2021 ರಲ್ಲಿ ಬ್ಯಾಲನ್ ಡಿ’ಓರ್ ಪ್ರಶಸ್ತಿಯನ್ನು ಗೆದ್ದಿದ್ದರು. ಮೆಸ್ಸಿ ಅವರಿಗೆ ಈ ಬಾರಿ ಮ್ಯಾಂಚೆಸ್ಟರ್ ಯುನೈಟೆಡ್​ ತಂಡದ ಮಾಜಿ ಆಟಗಾರ ಮತ್ತು ಇಂಟರ್ ಮಿಯಾಮಿ ಸಹ ಮಾಲೀಕ ಡೇವಿಡ್ ಬೆಕ್ಹ್ಯಾಮ್ ಅವರು ಪ್ರಶಸ್ತಿ ಪ್ರದಾನ ಮಾಡಿದರು.

ಈ ಸಮಾರಂಭ ಪ್ಯಾರಿಸ್​ನಲ್ಲಿ ನಡೆಯಿತು. ಕಳೆದ ವರ್ಷ ಕತಾರ್​ನಲ್ಲಿ ನಡೆದ ಫಿಫಾ ವಿಶ್ವಕಪ್​ ಟೂರ್ನಿಯಲ್ಲಿ ಮೆಸ್ಸಿ ನಾಯಕತ್ವದಲ್ಲಿ ಅರ್ಜೆಂಟೀನಾ ತಂಡ ಫ್ರಾನ್ಸ್​ ತಂಡವನ್ನು ಮಣಿಸಿ ಪ್ರಶಸ್ತಿ ಗೆದ್ದಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು