ಮುಂಬೈ: 2025ರ ಐಪಿಎಲ್ ಟೂರ್ನಿಗೂ ಮೊದಲೇ ಕನ್ನಡಿಗ ಕೆ.ಎಲ್ ರಾಹುಲ್ ಅವರು ಲಕ್ನೋ ಸೂಪರ್ ಜೈಂಟ್ಸ್ಗೆ ಗುಡ್ ಬಾಯ್ ಹೇಳುವ ಸಾಧ್ಯತೆ ಇದೆ. ಹೀಗಾಗಿ ಮುಂದಿನ ಐಪಿಎಲ್ ಸೀಸನ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಕೆ.ಎಲ್ ರಾಹುಲ್ ಮುನ್ನಡೆಸಬಹುದು ಎಂದು ಹೇಳಲಾಗುತ್ತಿದೆ.
ಕೆ.ಎಲ್ ರಾಹುಲ್ ಅವರು 2022 ರಿಂದ 2024ರವರೆಗೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಆಡಿದ್ದಾರೆ. ತಂಡವನ್ನು ಉತ್ತಮ ಮಟ್ಟಕ್ಕೆ ಕೊಂಡೊಯ್ಯುದಿದ್ದಾರೆ. ಆದರೆ 2024ರಲ್ಲಿ ಲಕ್ನೋ ಫ್ರಾಂಚೈಸಿಯ ಮಾಲೀಕರ ಜೊತೆ ನಡೆದಂತ ಘಟನೆ ನಂತರ ಕೆಲ ಸಂಬಂಧಗಳು ಅಷ್ಟೇನೂ ಚೆನ್ನಾಗಿಲ್ಲ ಎನ್ನಲಾಗಿದೆ. ಹೀಗಾಗಿ ರಾಹುಲ್, ಬೆಂಗಳೂರಿನ ಲೋಕಲ್ ಪ್ಲೇಯರ್ ಆಗಿದ್ದು ಜೊತೆಗೆ ಆರ್ಸಿಬಿ ಫ್ರಾಂಚೈಸಿ ಜೊತೆ ಉತ್ತಮ ಸಂಬಂಧ ಮುನ್ನಡೆಸಿಕೊಂಡು ಬಂದಿದ್ದಾರೆ.
ಮುಂದಿನ ಸೀಸನ್ನಲ್ಲಿ ಆರ್ಸಿಬಿಯ ನಾಯಕರಾಗಿ ನೇಮಕರಾಗುತ್ತಾರಾ ಎಂದು ಕಾದು ನೋಡಬೇಕಿದೆ. ಸದ್ಯ ಆರ್ಸಿಬಿಯ ನಾಯಕರಾಗಿರುವ ಫಾಫ್ ಡು ಪ್ಲೆಸಿಸ್ ಕಳೆದ 3 ವರ್ಷದಿಂದ ತಂಡ ಮುನ್ನಡೆಸುತ್ತಿದ್ದಾರೆ. 3 ಬಾರಿಯು ತಂಡವನ್ನು ಪ್ಲೇ ಆಫ್ವರಗೆ ಹೋದರು ಕಪ್ ಗೆಲ್ಲಲು ಆಗಿಲ್ಲ. ಅಲ್ಲದೇ ಇವರಿಗಿಗ 40 ವರ್ಷ ತುಂಬಿದ್ದು ಆರ್ಸಿಬಿ ಫ್ರಾಂಚೈಸಿ ಯುವನಾಯಕನಿಗಾಗಿ ಎದುರು ನೋಡುತ್ತಿದೆ. ಆ ಸ್ಥಾನವನ್ನು ಕೆ.ಎಲ್ ರಾಹುಲ್ ಅವರು ತುಂಬಬಹುದು ಎನ್ನಲಾಗುತ್ತಿದೆ.

