ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಪತ್ನಿ ಅಥಿಯಾ ಶೆಟ್ಟಿ ಇತ್ತೀಚೆಗೆ ‘ಕ್ರಿಕೆಟ್ ಫಾರ್ ಚಾರಿಟಿ’ ಹರಾಜು ನಡೆಸಿದ್ದರು. ನಿರ್ಗತಿಕ ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ವಿಪ್ಲ ಸಂಸ್ಥೆಗೆ ಸಹಾಯ ಮಾಡಲು ಈ ಹರಾಜು ಆಯೋಜಿಸಲಾಗಿತ್ತು. ಈ ಹರಾಜಿಗೆ ಖ್ಯಾತ ಕ್ರಿಕೆಟಿಗರು ತಮ್ಮ ವೈಯಕ್ತಿಕ ವಸ್ತುಗಳನ್ನು ನೀಡಿದ್ದರು. ಅದರಲ್ಲಿ ವಿರಾಟ್ ಕೊಹ್ಲಿಯ ಜೆರ್ಸಿ 40 ಲಕ್ಷ ರೂಪಾಯಿಗೆ ಮಾರಾಟವಾಗಿದೆ.
ವಿರಾಟ್ ಕೊಹ್ಲಿ ಜೆರ್ಸಿಯ ಅತ್ಯಂತ ದುಬಾರಿ ಬೆಲೆ 40 ಲಕ್ಷ ರೂಪಾಯಿಗೆ ಹರಾಜು ಆಗಿದೆ. ಅವರ ಕೈಗವಸುಗಗಳ ಮೇಲೆ 28 ಲಕ್ಷ ರೂಪಾಯಿ ಬಿಡ್ ನಡೆದಿದೆ. ರೋಹಿತ್ ಶರ್ಮಾರ ಬ್ಯಾಟ್ 24 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಎಂಎಸ್ ಧೋನಿ ಮತ್ತು ರಾಹುಲ್ ದ್ರಾವಿಡ್ ಅವರ ಬ್ಯಾಟ್‌ಗಳಿಗೆ ಕ್ರಮವಾಗಿ 13 ಲಕ್ಷ ಮತ್ತು 11 ಲಕ್ಷ ರೂಪಾಯಿಗೆ ಮಾರಾಟ ಆಗಿದೆ. ಕೆಎಲ್ ರಾಹುಲ್ ಜೆರ್ಸಿ 11 ಲಕ್ಷ ರೂಪಾಯಿಗೆ ಮಾರಾಟ ಆಗಿದೆ.

