ಪ್ಯಾರಿಸ್: 2024ರ ಪ್ಯಾರಿಸ್ ಒಲಿಂಪಿಕ್ಸ್​​ನಲ್ಲಿ ಆಗಸ್ಟ್ 2ರಂದು ನಡೆದ ಮಿಶ್ರ ಡಬಲ್ಸ್‌ನ ಟೆನಿಸ್‌ ಫೈನಲ್‌ನಲ್ಲಿ ಕಟೆರಿನಾ ಸಿನಿಯಾಕೋವಾ ಮತ್ತು ಟೊಮಾಸ್ ಮಚಾಕ್ ಸಂಚಲನವನ್ನು ಸೃಷ್ಟಿಸಿದ್ದಾರೆ. ಚೀನಾದ ವಾಂಗ್ ಕ್ಸಿನ್ಯು ಮತ್ತು ಜಾಂಗ್ ಝಿಜೆನ್​ರನ್ನು ಸೋಲಿಸಿದ ಬಳಿಕ ಚಿನ್ನ ಗೆದ್ದ ಖುಷಿಯಲ್ಲಿದ್ದ ಈ ಜೋಡಿ ಮೈದಾನದಲ್ಲೇ ಕಿಸ್ ಮಾಡಿದ್ದಾರೆ.

ಪಂದ್ಯ ಗೆದ್ದ ನಂತರ ಈ ಇಬ್ಬರೂ ಆಟಗಾರರು ಪರಸ್ಪರ ಮುತ್ತಿಟ್ಟಿದ್ದು ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ಏಕೆಂದರೆ ಸಿನಿಯಾಕೋವಾ ಮತ್ತು ತೋಮಸ್ ಮಚಕ್ 2021ರಿಂದ ಡೇಟಿಂಗ್ ಮಾಡುತ್ತಿದ್ದರಂತೆ. ಪ್ಯಾರಿಸ್ ಒಲಿಂಪಿಕ್ಸ್ ಪ್ರಾರಂಭವಾಗುವ ಕೆಲವು ದಿನಗಳ ಹಿಂದೆ ದಂಪತಿಗಳಿಬ್ಬರೂ ಬೇರ್ಪಟ್ಟಿದ್ದರಂತೆ. ಆದರೆ ಈ ಸ್ಟಾರ್​ ಜೋಡಿಯೂ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಇದಾದ ಬೆನ್ನಲ್ಲೇ ಮಿಶ್ರ ಡಬಲ್ಸ್‌ನ ಫೈನಲ್‌ನಲ್ಲಿ ಗೆದ್ದ ಬಳಿಕ ಈ ಜೋಡಿ ಒಬ್ಬರಿಗೊಬ್ಬರು ಚುಂಬಿಸಿದ್ದಾರೆ. ಬೇರ್ಪಟ್ಟ ನಂತರ ಇಬ್ಬರೂ ಪಂದ್ಯದ ನಂತರ ಪರಸ್ಪರ ಚುಂಬಿಸಿದಾಗ ಎಲ್ಲರೂ ಶಾಕ್​ ಆಗಿದ್ದಾರೆ.

https://x.com/CincyTennis/status/1819495464859062565