ಪ್ಯಾರಿಸ್: ಪ್ಯಾರಾಲಿಂಪಿಕ್ಸ್​ನಲ್ಲಿ ಜೂಡೋದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತದ ಅಥ್ಲೀಟ್ ಕಪಿಲ್ ಪರ್ಮಾರ್ ಇತಿಹಾಸ ನಿರ್ಮಿಸಿದ್ದಾರೆ.

ಕಪಿಲ್, ಬ್ರೆಜಿಲ್ ಆಟಗಾರನನ್ನು ಕೇವಲ 33 ಸೆಕೆಂಡುಗಳಲ್ಲಿ ಸೋಲಿಸಿ ಕಂಚಿನ ಪದಕ ಗೆದ್ದರು. ಇದರೊಂದಿಗೆ ಪ್ಯಾರಾಲಿಂಪಿಕ್ ಇತಿಹಾಸದಲ್ಲಿ ಜೂಡೋದಲ್ಲಿ ಪದಕ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದು ಭಾರತಕ್ಕೆ ಸಿಕ್ಕ 11ನೇ ಕಂಚಿನ ಪದಕವಾದರೆ, ಒಟ್ಟಾರೆ ಭಾರತದ ಪದಕಗಳ ಸಂಖ್ಯೆ 25ಕ್ಕೇ ಬಂದುನಿಂತಿದೆ. ಪ್ಯಾರಾಲಿಂಪಿಕ್ಸ್‌ನಲ್ಲಿ ಆಗಸ್ಟ್ 28 ರಿಂದ ಸೆಪ್ಟೆಂಬರ್ 8 ರವರೆಗೆ ನಡೆಯಲಿದೆ.