ಪ್ಯಾರಿಸ್ ಪ್ಯಾರಾಲಿಂಪಿಕ್ಸ್-2024 ನಿರೀಕ್ಷೆಗಳಿಗೂ ಮೀರಿದ ಸಂಗತಿಗಳಿಗೆ ಸಾಕ್ಷಿ ಆಗ್ತಿದೆ. 7 ತಿಂಗಳ ತುಂಬು ಗರ್ಭಿಣಿ ಪ್ಯಾರಾ ಅಥ್ಲೀಟ್ ಪದಕ ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಹೌದು. .

ಗ್ರೇಟ್ ಬ್ರಿಟನ್‌ನ ಜೋಡೀ ಗ್ರಿನ್‌ಹ್ಯಾಮ್ ಈ ಸಾಧನೆ ಮಾಡಿದ್ದಾರೆ. ಗ್ರಿನ್‌ಹ್ಯಾಮ್ ಅವರು ಬಿಲ್ಲುಗಾರಿಕೆಯಲ್ಲಿ ಪದಕ ಗೆದ್ದಿದ್ದಾರೆ. ಈ ಮೂಲಕ ಜಗತ್ತಿನಾದ್ಯಂತ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಇದೀಗ ಅವರ ಧೈರ್ಯವನ್ನು ಎಲ್ಲರೂ ಕೊಂಡಾಡುತ್ತಿದ್ದಾರೆ.

ಗ್ರಿನ್‌ಹ್ಯಾಮ್ ಕಂಚಿನ ಪದಕ ಗೆದ್ದರು. ಆಗಸ್ಟ್ 31 ರಂದು ಗ್ರಿನ್‌ಹ್ಯಾಮ್ ಮಹಿಳಾ ಕಾಂಪೌಂಡ್‌ನಲ್ಲಿ ಗ್ರೇಟ್ ಬ್ರಿಟನ್‌ನ ಫೋಬೆ ಪ್ಯಾಟರ್ಸನ್ ಪೈನ್ ವಿರುದ್ಧ ಕಂಚಿನ ಪದಕ ಗೆದ್ದಿದ್ದಾರೆ. ಎದುರಾಳಿ ವಿರುದ್ಧ 142-141 ಅಂಕಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ಗ್ರಿನ್‌ಹ್ಯಾಮ್ ಗರ್ಭಿಣಿಯಾಗಿದ್ದಾಗ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಪದಕ ಗೆದ್ದ ಮೊದಲ ಪ್ಯಾರಾ ಅಥ್ಲೀಟ್. ಇವರು ಎಡಗೈಯಲ್ಲಿ ಅಂಗವೈಕಲ್ಯ ಹೊಂದಿದ್ದಾರೆ.