ಮುಂಬೈ: ಐದು ಬಾರಿ ಟ್ರೋಫಿ ಗೆಲ್ಲಿಸಿದ ಕ್ಯಾಪ್ಟನ್ ರೋಹಿತ್ ಶರ್ಮಾ ಮಾತಿಗೂ ಕ್ಯಾರೇ ಎನ್ನದ ಮುಂಬೈ ಇಂಡಿಯನ್ಸ್ ತಂಡ ಹಾರ್ದಿಕ್ ಪಾಂಡ್ಯಗೆ ಮಣೆ ಹಾಕಿದೆ. ಗುಜರಾತ್ ಟೈಟನ್ಸ್ ತಂಡದ ಕ್ಯಾಪ್ಟನ್ ಆಗಿದ್ದ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
ಈ ಬೆನ್ನಲ್ಲೇ ಮುಂಬೈ ತಂಡದ ಕ್ಯಾಪ್ಟನ್ಸಿ ಮೇಲೆ ಕಣ್ಣಿಟ್ಟಿದ್ದ ಸ್ಟಾರ್ ವೇಗಿ ಜಸ್ಪ್ರಿತ್ ಬುಮ್ರಾ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾತು ಕೇಳಿ ಬಂದಿದೆ.
“ಸೈಲೆನ್ಸ್ ಈಸ್ ದಿ ಬೆಸ್ಟ್ ಆನ್ಸರ್” ಎಂದು ತನ್ನ ಇನ್ಸ್ಟಾ ಖಾತೆಯಲ್ಲಿ ಬರೆದು ಮುಂಬೈ ಇಂಡಿಯನ್ಸ್ ತಂಡವನ್ನು ಅನ್ಫಾಲೋ ಮಾಡಿದ್ದಾರೆ ಬುಮ್ರಾ. ಅಷ್ಟೇ ಅಲ್ಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಇನ್ಸ್ಟಾದಲ್ಲಿ ಬುಮ್ರಾ ಫಾಲೋ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.
ಸದ್ಯ ಇದೇ ವಿಚಾರ ಐ ಪಿಎಲ್ ಪ್ರೇಮಿಗಳ ವಲಯದಲ್ಲಿ ಸಕತ್ ಚರ್ಚೆ ಆಗುತ್ತಿದೆ. ಹೀಗಾಗಿ ಮುಂದಿನ ತಿಂಗಳು ಐಪಿಎಲ್ ಹರಾಜು ನಡೆಯಲಿದ್ದು, ಅಷ್ಟರೊಳಗೆ ಆರ್ಸಿಬಿ ತಂಡವನ್ನು ಬುಮ್ರಾ ಅಧಿಕೃತವಾಗಿ ಸೇರೋ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.
https://twitter.com/Swetha_little_/status/1729385527902884288