ನವದೆಹಲಿ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ ಟೂರ್ನಿಯು ಅಕ್ಟೋಬರ್ 10ರಂದು ಆರಂಭವಾಗಿ 2027ರ ಮೇ ವರೆಗೆ ನಡೆಯಲಿದೆ.

ಕಳೆದ ಋತುವಿನಲ್ಲಿ ಆಡಳಿತಾತ್ಮಕ ಮತ್ತು ವಾಣಿಜ್ಯ ಅನಿಶ್ಚಿತತೆಯ ಕಾರಣದಿಂದ ಐಎಸ್‌ಎಲ್ ಅನ್ನು ಮೊಟಕುಗೊಳಿಸಿ, ಒಂದೇ ಲೆಗ್‌ ಸ್ವರೂಪದಲ್ಲಿ ಆಡಿಸಲಾಗಿತ್ತು. 2026-27ರ ಆವೃತ್ತಿಯು ‘ಕ್ಲಬ್‌ ಕೇಂದ್ರಿತ ಮಾದರಿ’ಯಲ್ಲಿ ನಡೆಯಲಿದ್ದು, ಎಂಟು ತಿಂಗಳ ಅವಧಿಯಲ್ಲಿ 163 ಪಂದ್ಯಗಳನ್ನು ನಿಗದಿಪಡಿಸಲಾಗಿದೆ.

ಜೆಮ್ಶೆಡ್‌ಪುರ ಎಫ್‌ಸಿ ತಂಡದ ಬದಲು ಚರ್ಚಿಲ್ ಬ್ರದರ್ಸ್ ಎಫ್‌ಸಿ ತಂಡವು ಕಣಕ್ಕಿಳಿಯಲು ಸಜ್ಜಾಗಿದೆ. ಅ.16ರಿಂದ ಮಹಿಳಾ ಲೀಗ್‌: ಇಂಡಿಯನ್‌ ಮಹಿಳಾ ಲೀಗ್‌ನ ಹಿಸ ಆವೃತ್ತಿಯು ಅ.16ರಂದು ಆರಂಭವಾಗಲಿದೆ ಎಂದು ಅಖಿಲ ಬಾರತ ಫುಟ್‌ಬಾಲ್‌ ಫೆಡರೇಷನ್‌ ಹೇಳಿದೆ.