Categories: ಕ್ರೀಡೆ

ಮುಂಬೈ ಇಂಡಿಯನ್ಸ್​ಗೆ ಹಾರ್ದಿಕ್​ ಪಾಂಡ್ಯ ಎಂಟ್ರಿ

ಮುಂಬೈ: ಹಾರ್ದಿಕ್ ಪಾಂಡ್ಯ ಗುಜರಾತ್​​ ಟೈಟನ್ಸ್​ಗೆ ತೊರೆಯೋದು ಪಕ್ಕ ಆಗಿದೆ. ಮರಳಿ ಗೂಡಿಗೆ ಸೇರುತ್ತಿರುವ ಹಾರ್ದಿಕ್​​ ಪಾಂಡ್ಯ, ಮುಂಬೈ ಇಂಡಿಯನ್ಸ್​ಗೆ ಬಲ ತುಂಬುತ್ತಿದ್ದಾರೆ.

ಸೀಸನ್​​-17ರ ಐಪಿಎಲ್​ಗೆ ಸಿದ್ಧತೆಗಳು ಜೋರಾಗಿ ನಡೆಯುತ್ತಿವೆ. ಬಲಿಷ್ಠ ತಂಡಗಳನ್ನ ಕಟ್ಟಲು ಮುಂದಾಗಿರುವ ಫ್ರಾಂಚೈಸಿಗಳು, ಇನ್ನಿಲ್ಲದ ಕಸರತ್ತುಗಳನ್ನ ನಡೆಸ್ತಿವೆ. ಆಟಗಾರರ ಟ್ರೇಡಿಂಗ್, ರಿಲೀಸ್​ನಲ್ಲಿ ಬ್ಯುಸಿಯಾಗಿರುವ ಟೀಮ್ಸ್, ಮತ್ತೊಂದಡೆ ಬಿಗ್ ಮ್ಯಾಚ್​ ವಿನ್ನರ್​​ಗಳನ್ನೇ ಟಾರ್ಗೆಟ್ ಮಾಡುವಲ್ಲಿ ಬ್ಯುಸಿಯಾಗಿವೆ. ಇದರಂತೆಯೇ ಗುಜರಾತ್ ಟೈಟನ್ಸ್ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ತೊರೆಯುತ್ತಿದ್ದಾರೆ.

ಈಗ ಮುಂಬೈ ಇಂಡಿಯನ್ಸ್ ಸೇರೋಕೆ ರೆಡಿಯಾಗಿದ್ದಾರೆ. ಇತ್ತ ಗುಜರಾತ್ ಟೈಟನ್ಸ್​ಗೆ ಮಾತ್ರ ಇದು ನುಂಗಲಾರದ ತುತ್ತಾಗಲಿದೆ. ಇದು ಸಹಜವಾಗೇ ಭಾರೀ ಕುತೂಹಲ ಹುಟ್ಟಿಹಾಕಿದೆ. ಯಾಕಂದ್ರೆ, ನಾಯಕನಾದ ಮೊದಲ ಸೀಸನ್​ನಲ್ಲೇ ಗುಜರಾತ್​ಗೆ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಹಾರ್ದಿಕ್​, ನಾಯಕನಾಗಿ ಮಾತ್ರವೇ ಅಲ್ಲ. ಓರ್ವ ಪರಿಪೂರ್ಣ ಆಲ್​ರೌಂಡರ್ ಆಗಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವನ್ನೇ ವಹಿಸಿದರು. ಹೀಗಾಗಿ ಮುಂದೆ ಪಾಂಡ್ಯ ಬದಲಿಯಾಗಿ ಯಾರನ್ನ ತಂಡಕ್ಕೆ ಕರೆತರುತ್ತೆ, ಬೆಸ್ಟ್​ ರಿಪ್ಲೇಸ್​ಮೆಂಟ್ ಆಲ್​ರೌಂಡರ್ ಯಾರು ಇವರಿಗೆ ಸಿಗುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

Ashitha S

Recent Posts

ಬಿರುಗಾಳಿ ಮಳೆಗೆ ಉರುಳಿ ಬಿದ್ದ ಬೃಹತ್ ಅರಳಿ ಮರ: ನಾಲ್ಕು ಮನೆಗಳು ಜಖಂ

ಬಿರುಗಾಳಿ ಸಹಿತ ಸುರಿದ ಧಾರಾಕಾರ ಮಳೆಗೆ ಅರಳಿ ಮರವೊಂದು ಬೇರು ಸಮೇತ ನಾಲ್ಕು ಮನೆಗಳ ಮೇಲೆ ಉರುಳಿ ಬಿದ್ದು ಮನೆಗಳು…

12 mins ago

ಕೇಜ್ರಿವಾಲ್‌ಗೆ ಷರತ್ತು ವಿಧಿಸಿ ಜಾಮೀನು ನೀಡಿದ ಸುಪ್ರೀಂಕೋರ್ಟ್‌

ಮದ್ಯ ನೀತಿ ಪ್ರಕರಣದಲ್ಲಿ ಜೈಲು ಸೇರಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ಗೆ ಸುಪ್ರೀಂಕೋರ್ಟ್‌ ಮಧ್ಯಂತ ಜಾಮೀನು ನೀಡಿದ್ದು, ಕೆಲವು ಷರತ್ತುಗಳನ್ನು ಸಹ…

36 mins ago

ಅಶ್ಲೀಲ‌ ವಿಡಿಯೋ ಕೇಸ್: ಮೂಡಿಗೆರೆಯಲ್ಲಿ ಪ್ರಜ್ವಲ್ ಬಂಧನ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಹಗರಣಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರಿನಲ್ಲಿ ಪೊಲೀಸರು ಪ್ರಜ್ವಲ್ ನನ್ನು ಬಂಧಿಸಿದ್ದಾರೆ.

1 hour ago

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯ ಶವ ಪತ್ತೆ

ಎಸ್ಎಸ್ಎಲ್ ಸಿ ವಿದ್ಯಾರ್ಥಿನಿಯನ್ನು ಕೊಂದು ತಲೆಮರೆಸಿಕೊಂಡಿದ್ದ ಆರೋಪಿ ಪ್ರಕಾಶ್‌ ಶವವಾಗಿ ಪತ್ತೆಯಾಗಿದ್ದಾನೆ.

1 hour ago

ದಾಭೋಲ್ಕರ ಹತ್ಯೆ ಕೇಸ್ ನಲ್ಲಿ ಸನಾತನ ಸಂಸ್ಥೆಯ ನಿರಪರಾಧಿತನ ಸಾಬೀತು; ಸನಾತನ ಸಂಸ್ಥೆ ಸಂತಸ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪುಣೆಯ ವಿಶೇಷ ನ್ಯಾಯಾಲಯ ಇಂದು ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರೆಂದು ಪರಿಗಣಿಸಿ…

1 hour ago

ಕೊಲ್ಲೂರು ಪುಣ್ಯ ನದಿಗಳ ಮಾಲಿನ್ಯ: ಅರ್ಜಿ ವಿಚಾರಣೆಗೆ ಹಸಿರು ಪೀಠ ಅಂಗೀಕಾರ

ದಕ್ಷಿಣ ಭಾರತದ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಕೊಲ್ಲೂರಿನ ಪುಣ್ಯ ನದಿಗಳನ್ನು ಮಾಲಿನ್ಯಗೊಳಿಸುತ್ತಿರುವ, ಪರಿಸರ ನಾಶಗೊಳಿಸುತ್ತಿರುವ ಹಾಗೂ ಸರ್ಕಾರಿ ಭೂಮಿಗಳ ಅತಿಕ್ರಮಣದ…

1 hour ago