7ನೇ ಗೆವಿನ್ ಮಲೇಷ್ಯಾ ಓಪನ್ ಇಂಟರ್​ನ್ಯಾಷನಲ್​​ ಟೆಕ್ವಾಂಡೋ ಚಾಂಪಿಯನ್‌ಶಿಪ್​​​ನಲ್ಲಿ ಕನ್ನಡಿಗ ಅದ್ಭುತ ಸಾಧನೆ ಮಾಡಿದ್ದಾರೆ.

14ನೇ ವಯಸ್ಸಿನಲ್ಲಿ ಬೆಂಗಳೂರಿನ ಯುವ ಪ್ರತಿಭೆ ಸುಜನ್ ಇಂಟರ್​​​ನ್ಯಾಷನಲ್​ ಟೆಕ್ವಾಂಡೋ ಚಾಂಪಿಯನ್‌ಶಿಪ್ ಗೆದ್ದಿದ್ದಾರೆ. ಟೆಕ್ವಾಂಡೋ ಕ್ರೀಡೆಯಲ್ಲಿ 4 ವರ್ಷಗಳಿಂದ ಸುಜನ್​ ತರಬೇತಿ ಪಡೆಯುತ್ತಿದ್ದಾರೆ.

3 ಚಿನ್ನದ ಪದಕ, ಒಂದು ಬೆಳ್ಳಿ ಪದಕ ಹಾಗೂ 2 ಬಾರಿ ಚಾಂಪಿಯನ್ಸ್​ ಬೆಲ್ಟ್ ಚಾಂಪಿಯನ್ ತನ್ನದಾಗಿಸಿಕೊಂಡಿದ್ದಾರೆ. ಯುವ ಟೆಕ್ವಾಂಡೋ ಪಟು ಸುಜನ್​, ಸುರೇಶ್ ಮಾಸ್ಟರ್ ಗರಡಿಯಲ್ಲಿ ಪಳಗಿದ ಹುಡುಗನಾಗಿದ್ದಾನೆ. SG ಟೇಕ್ವಾಂಡೋ ಕೇಂದ್ರದಲ್ಲಿ ಟ್ರೇನಿಂಗ್ ಪಡೆಯುತ್ತಿದ್ದಾರೆ.