News Karnataka Kannada
Monday, May 20 2024
ಕ್ರೀಡೆ

4×400 ಮೀ ರಿಲೇ ಓಟದಲ್ಲಿ ಫೈನಲ್‌ಗೇರಿದ ಭಾರತ ಪುರುಷರ ತಂಡ

Indian men's 4×400m relay race reaches final
Photo Credit : IANS

ಹಂಗೇರಿ: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ಜಾವೆಲಿನ್ ವಿಭಾಗದಲ್ಲಿ ನೀರಜ್ ಚೋಪ್ರಾ, ಡಿಪಿ ಮನು, ಕಿಶೋರ್ ಜೆನಾ ಫೈನಲ್​ಗೇರಿದ್ದು, ಭಾರತ ಹೊಸ ಇತಿಹಾಸ ಬರೆಯುವ ಹೊಸ್ತಿಲಿನಲ್ಲಿದೆ. ಇದೀಗ 4×400 ಮೀಟರ್ಸ್ ರಿಲೇ ಓಟದಲ್ಲಿ ಮೊಹಮ್ಮದ್ ಅನಾಸ್, ಅಮೋಜ್ ಜಾಕೋಬ್, ಮೊಹಮ್ಮದ್ ಅಜ್ಮಲ್ ಮತ್ತು ರಾಜೇಶ್ ರಮೇಶ್ ಅವರ ರಿಲೇ ತಂಡವು ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೊದಲ ಬಾರಿಗೆ ಫೈನಲ್‌ಗೆ ಪ್ರವೇಶಿಸಿ ದಾಖಲೆ ಬರೆದಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಅರ್ಹತಾ ಸುತ್ತಿನಲ್ಲಿ ಭಾರತದ ಪುರುಷರ ತಂಡವು 4×400 ಮೀಟರ್‌ ಓಟವನ್ನು 2.59.05 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿತು. ಅತಿ ಕಡಿಮೆ ಸಮಯದಲ್ಲಿ ಈ ಓಟವನ್ನು ಪೂರ್ಣಗೊಳಿಸಿದ ಭಾರತ ರಿಲೇ ತಂಡ, ಏಷ್ಯನ್ ದಾಖಲೆಯನ್ನು ಸಹ ಮುರಿಯಿತು.

ಟೋಕಿಯೊ ಒಲಿಂಪಿಕ್ಸ್‌ನ 4×400 ಮೀಟರ್‌ ರಿಲೇ ರೇಸ್‌ನಲ್ಲಿ ಭಾರತ ಫೈನಲ್‌ಗೆ ತಲುಪಲು ಸಾಧ್ಯವಾಗಲಿಲ್ಲ. ಆದರೆ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸುವ ಮೂಲಕ ಇತಿಹಾಸ ಸೃಷ್ಟಿಸಿದೆ.

ಭಾರತ ಫೈನಲ್ ಟಿಕೆಟ್ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 4×400 ಮೀಟರ್ ರಿಲೇ ಓಟದ ಫೈನಲ್ ಇಂದು ನಡೆಯಲಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು