ಅಮೇರಿಕಾ : ಅಮೆರಿಕದ ಪ್ರತಿಷ್ಠಿತ ಸ್ಪೆಲ್ಲಿಂಗ್ ಬೀ ಸ್ಪರ್ಧೆಯಲ್ಲಿ ಭಾರತ ಮೂಲದ ಭಾರತ ಮೂಲದ 12 ವರ್ಷದ ಬಾಲಕ ಚಾಂಪಿಯನ್ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾನೆ. ಭಾರತೀಯ ಮೂಲದ ಬೃಹತ್ ಸೋಮ 29 ಪದಗಳ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ಹೇಳುವ ಮೂಲಕ ಚಾಂಪಿಯನ್ ಪಟ್ಟ ಪಡೆಯುವ ಮೂಲಕ ನಮ್ಮ ದೇಶಸ ಕೀರ್ತಿ ಹೆಚ್ಚಿಸಿದ್ದಾನೆ.
ಇನ್ನು ಫೈಜಾನ್ ಜಾಕಿಯನ್ನು ಸೋಲಿಸುವ ಮೂಲಕ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಬೃಹತ್, 50,000 ಡಾಲರ್ ನಗದು ಬಹುಮಾನವನ್ನೂ ಪಡೆದಿದ್ದಾನೆ.
ಏನಿದು ಸ್ಪರ್ಧೆ,
ಸ್ಪೆಲ್ಲಿಂಗ್ ಬೀ ಇಂಗ್ಲೀಷ್ ಭಾಷೆಯ ಅತ್ಯಂತ ಪ್ರತಿಷ್ಠೆಯ ಸ್ಪರ್ಧೆ ಇದಾಗಿದ್ದು, ಈ ಬಾರಿ ವಾಷಿಂಗ್ಟನ್‌ನಲ್ಲಿ ಆಯೋಜನೆಗೊಂಡಿತ್ತು. ಇನ್ನು ಏಳನೇ ತರಗತಿಯಲ್ಲಿ ಓದುತ್ತಿರುವ ಬೃಹತ್, ಇದಕ್ಕೂ ಮುನ್ನ ನಡೆದ ಮೂರು ಸ್ಪೆಲ್ಲಿಂಗ್ ಬೀ ಸ್ಪರ್ಧೆಗಳನ್ನು ಗೆದ್ದ ಬಳಿಕ ಅಂತಿಮ ಘಟ್ಟಕ್ಕೆ ತಲುಪಿದ್ದ.
ಇನ್ನು ತನ್ನ ಗೆಲುವಿನ ಬಗ್ಗೆ ಮಾತನಾಡಿದ ಬೃಹತ್, ಕಳೆದ ಮೂರು ಸ್ಪೆಲ್ಲಿಂಗ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿರುವುದ ದೊಡ್ಡ ವಿಚಾರವೇನಲ್ಲ. ನನ್ನ ಅಂತಿಮ ಗುರಿ ಇದಾಗಿತ್ತು. ಈ ಸ್ಪರ್ಧೆಯನ್ನು ನಾನು ಗೆದ್ದಿದ್ದೇನೆ. ಆ ಬಗ್ಗೆ ನನಗೆ ಬಹಳಷ್ಟು ಸಂತೋಷವಿದೆ ಎಂದು ಹೇಳಿದ್ದಾರೆ. ಇನ್ನು ಕಳೆದ 35 ವರ್ಷಗಳಲ್ಲಿ 29 ನೇ ಬಾರಿ ಭಾರತೀಯ ಮೂಲದ ಅಮೆರಿಕನ್ ಬಾಲಕ ಈ ಸ್ಪರ್ಧೆಯಲ್ಲಿ ಗೆಲುವು ಸಾಧಿಸುತ್ತಿರುವುದು.

