ಪ್ಯಾರಿಸ್: ಭಾರತದ ಬಾಕ್ಸರ್ ನಿಶಾಂತ್ ದೇವ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಬುಧವಾರ ತಡರಾತ್ರಿ ನಡೆದ ಪ್ರೀ-ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಜೋಸ್ ಗೇಬ್ರಿಯಲ್ ರೊಡ್ರಿಗಸ್ ಟೆನೊರಿಯೊ ಅವರನ್ನು 3-2 ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟರು. ಮುಂದಿನ ಪಂದ್ಯದಲ್ಲಿ ನಿಶಾಂತ್, ಮೊಜಾಂಬಿಕ್‌ನ ಟಿ ಮುಕ್ಸಾಂಗಾ ಮತ್ತು ಮೆಕ್ಸಿಕೊದ ಎಂಎ ವರ್ಡೆ ಅಲ್ವಾರೆಜ್ ನಡುವಣ ವಿಜೇತರನ್ನು ಎದುರಿಸಲಿದೆ.
ತೀವ್ರ ಪೈಪೋಟಿಯಿಂದ ಸಾಗಿದ ಈ ಪಂದ್ಯದಲ್ಲು ಉಭಯ ಬಾಕ್ಸರ್ಗಳು ಬಲಿಷ್ಠ ಪಂಚ್ಗಳ ಮೂಲಕ ಗೆಲುವಿಗಾಗಿ ಹೋರಾಟ ನಡೆಸಿದರು. ಕೊನೆಗೂ ನಿಶಾಂತ್ ದೇವ್ 7ನೇ ಶ್ರೇಯಾಂಕದ ಆಟಗಾರರನ್ನು ಕೇವಲ 1(3-2) ಅಂಕದ ಅಂತರದಿಂದ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

