ಬೆಂಗಳೂರು: 2024ರ ಪ್ಯಾರಿಸ್ ಒಲಿಂಪಿಕ್ಸ್​ ವೇಳೆ ಕೋಟ್ಯಂತರ ಮಂದಿ ಸುಂದರ ನಗರ ಸೇರಿದಂತೆ ದೇಶದ ಏಳು ತಾಣಗಳಲ್ಲಿ ಜಮಾವಣೆಯಾಗಲಿದ್ದಾರೆ.  ಅಹಿತಕರ ಘಟನೆಗಳು ಹಾಗೂ ದೇಶಗಳ ನಡುವಿನ ಸಂಘರ್ಷಗಳು ಕೂಟಕ್ಕೆ ಭದ್ರತೆಯ ಬೆದರಿಕೆಯನ್ನೊಡಿದೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಭದ್ರತೆಗಾಗಿ ವಿದೇಶಗಳ ನೆರವು ಕೂಡ ಪಡೆಯಲಾಗುತ್ತಿದೆ. ಅಂತೆಯ ಭಾರತದ ಗಣ್ಯ ಶ್ವಾನದಳ ಮತ್ತು ಪ್ರಸಿದ್ಧ ‘ಕೆ -9’ ತಂಡವನ್ನು ಪ್ಯಾರಿಸ್​ನಲ್ಲಿ ನಿಯೋಜಿಸಲಾಗಿದೆ.

ಮುಂಬರುವ ಒಲಿಂಪಿಕ್ಸ್​ ಕ್ರೀಡಾಕೂಟದ ಭದ್ರತೆ ಒದಗಿಸಲು ಸಹಾಯ ಮಾಡಲು 10 ಸದಸ್ಯರ ಕೆ -9 ತಂಡವನ್ನು ಪ್ಯಾರಿಸ್​​ಗೆ ಒಂದು ತಿಂಗಳ ಅವಧಿಗೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ. ಸಿಆರ್​​ಪಿಎಫ್​ಗೆ ಸೇರಿತ ಭಾರತೀಯ ಕೆ 9 (ಶ್ವಾನ) ತಂಡಗಳು ಪ್ಯಾರಿಸ್ ಒಲಿಂಪಿಕ್ಸ್​​ನ ಉದ್ಘಾಟನಾ ಕಾರ್ಯಕ್ರಮಗಳನ್ನು ನಡೆಸುವ ವಿವಿಧ ಸ್ಥಳಗಳಲ್ಲಿ ಸ್ನಿಫಿಂಗ್ ಮತ್ತು ಗಸ್ತು ಕರ್ತವ್ಯಗಳನ್ನು ಕೈಗೊಳ್ಳಲಿವೆ.

196 ರಾಷ್ಟ್ರಗಳ ಕ್ರೀಡಾಪಟುಗಳು ಭಾಗವಹಿಸುವ 2024 ರ ಬೇಸಿಗೆ ಒಲಿಂಪಿಕ್ ಕ್ರೀಡಾಕೂಟ ಪೂರ್ಣಗೊಳ್ಳುವವರೆಗೆ ಈ ತಂಡ ಅಲ್ಲಿ ಇರಲಿದೆ. ಒಲಿಂಪಿಕ್ಸ್ ಜುಲೈ 26 ರಿಂದ ಆಗಸ್ಟ್ 11 ರವರೆಗೆ ನಡೆಯಲಿದ್ದು, ವಿದೇಶಗಳ ಬೆದರಿಕೆಗಳನ್ನು ತಡೆಯಲು ಮತ್ತು ಸಾರ್ವಜನಿಕ ಸುವ್ಯವಸ್ಥೆ ಕಾಪಾಡಿಕೊಳ್ಳಲು ವ್ಯಾಪಕ ಭದ್ರತಾ ಕ್ರಮಗಳನ್ನು ಜಾರಿಗೆ ತರಲಾಗಿದೆ.

ಫ್ರಾನ್ಸ್ ನೊಂದಿಗಿನ ಭಾರತದ ‘ಭದ್ರತಾ ಸಹಕಾರ’ ಯೋಜನೆಯಡಿ ಕೆ -9 ತಂಡವನ್ನು ನಿರ್ದಿಷ್ಟವಾಗಿ ಆಹ್ವಾನಿಸಲಾಗಿದೆ. ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಪಡೆಯಲು ಭಾರತದ ಎಲೈಟ್ ಕೆ -9 ತಂಡವು ಸಹಾಯ ಮಾಡುತ್ತದೆ. ಇದು ಅವರ ಮೊದಲ ಅಂತಾರಾಷ್ಟ್ರೀಯ ಭದ್ರತಾ ಕರ್ತವ್ಯವಾಗಿದೆ. ಅಸಾಧಾರಣ ಕೌಶಲ್ಯಗಳಿಗೆ ಹೆಸರುವಾಸಿಯಾದ ತರಬೇತಿ ಪಡೆದ ಶ್ವಾನಗಳು ಕ್ರೀಡಾಕೂಟದ ಸುರಕ್ಷತೆ ಖಚಿತಪಡಿಸಿಕೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿವೆ.

ವಾಸ್ಟ್ ಮತ್ತು ಡೆನ್ಬಿ ಎಂಬ ಎರಡು ಶ್ವಾನಗಳು ಮತ್ತು ಅವುಗಳ ಹ್ಯಾಂಡ್ಲರ್​ಗಳು ಜುಲೈ 10, 2024 ರಂದು ಪ್ಯಾರಿಸ್​ಗೆ ತೆರಳಿದ್ದಾರೆ. ಒಲಿಂಪಿಕ್ಸ್​​ನ ನಾನಾ ಸ್ಥಳಗಳಲ್ಲಿ ಭದ್ರತೆ ಒದಗಿಸಲು ಆಯ್ಕೆಯಾದ 10 ಮಂದಿ ಕೆ 9 ತಂಡದ ಭಾಗವಾಗಿದ್ದಾರೆ. ಬ್ರಾಡ್ ಮತ್ತು ಡೆನ್ಬಿ ಕ್ರಮವಾಗಿ 5 ಮತ್ತು 3 ವರ್ಷ ವಯಸ್ಸಿನ ಬೆಲ್ಜಿಯಂನ ಶೆಫರ್ಡ್ ಮಾಲಿನೋಯಿಸ್ ಶ್ವಾನಗಳ .

ನಿಯೋಜನೆಗೆ ಮೊದಲು ಅವರು 10 ವಾರಗಳ ಕಾಲ ಕಠಿಣ ಪರೀಕ್ಷೆ ಮತ್ತು ವಿಶೇಷ ತರಬೇತಿಗೆ ಒಳಗಾಗಿದ್ದರು. ಹ್ಯಾಂಡ್ಲರ್ ಗಳು ದೈಹಿಕ ತರಬೇತಿ ಮತ್ತು ಫ್ರೆಂಚ್ ಭಾಷಾ ತರಗತಿಗಳನ್ನು ಸಹ ಪಡೆದಿದ್ದಾರೆ. ಬೆಲ್ಜಿಯಂ ಶೆಫರ್ಡ್ ಮಾಲಿನೋಯಿಸ್ ತಳಿಯನ್ನು ವಿಶ್ವಾದ್ಯಂತ ಭದ್ರತಾ ಪಡೆಗಳು ಬಳಸಿಕೊಳ್ಳುತ್ತವೆ.