ಹರಾರೆ: ಕಳೆದೆರಡು ಪಂದ್ಯದಲ್ಲಿ ಜಿಂಬಾಬೈ ವಿರುದ್ಧ ಅಮೋಘ ಪ್ರದರ್ಶನ ತೋರಿರುವ ಯುವ ಭಾರತ ತಂಡ ಇದೀಗ 4ನೇ ಟಿ20 ಪಂದ್ಯವನ್ನು ಆಡಲಿದೆ.ಸದ್ಯ ಸರಣಿ ಗೆಲುವಿನ ನಿರೀಕ್ಷೆಯಲ್ಲಿದ್ದು, ಶನಿವಾರ ಸರಣಿಯ 4ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಶುಭಮನ್ ಗಿಲ್ ನಾಯಕತ್ವದ ಭಾರತ ಸದ್ಯ 2-1 ಮುನ್ನಡೆಯಲ್ಲಿದೆ.

ಆರಂಭದ ಆಟದಲ್ಲಿ ಸೋಲುಂಡು ನಿರಾಸೆಗೊಂಡಿತ್ತಾದರು ಎರಡನೇ ಆಟದ ಗೆಲುವಿನ ಮೂಲಕ ಎಚ್ಚೆತ್ತುಕೊಂಡಿತ್ತು ನಂತರ ಈಗ ಸರಣಿ ಗೆಲುವಿನ ನಿರೀಕ್ಷೆಯಲ್ಲಿದೆ.

2ನೇ ಪಂದ್ಯದಲ್ಲಿ ಆರಂಭಿಕನಾಗಿ ಅಬ್ಬರದ ಶತಕ ಸಿಡಿಸಿದ್ದ ಅಭಿಷೇಕ್ ಶರ್ಮಾ 3ನೇ ಕ್ರಮಾಂಕದಲ್ಲೂ ಅಮೋಘ ಆಟವಾಡಬೇಕಿದೆ. ಋತುರಾಜ್ ಗಾಯಕ್ವಾಡ್ ಉತ್ತಮ ಲಯದಲ್ಲಿದ್ದು, ನಾಯಕ ಶುಭಮನ್ ದೊಡ್ಡ ಇನ್ನಿಂಗ್ಸ್ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದೆಡೆ ರವೀಂದ್ರ ಜಡೇಜಾರ ಸ್ಥಾನ ತುಂಬಲು ಎದುರು ನೋಡುತ್ತಿರುವ ವಾಷಿಂಗ್ಟನ್ ಸುಂದರ್ ಮತ್ತೊಮ್ಮೆ ಅಭೂತ ಪೂರ್ವ ಪ್ರದರ್ಶನ ನೀಡುವ ನಿರೀಕ್ಷೆಯಲ್ಲಿದ್ದಾರೆ

ಭಾರತ: ಶುಭಮನ್ ಗಿಲ್‌(ನಾಯಕ), ಅಭಿಷೇಕ್‌ ಶರ್ಮಾ, ಯಶಸ್ವಿ ಜೈಸ್ವಾಲ್‌, ಋತುರಾಜ್‌ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್‌ ಸುಂದರ್, ಆವೇಶ್‌ ಖಾನ್, ಮುಕೇಶ್‌ ಕುಮಾರ್, ರವಿ ಬಿಷ್ಣೋಯ್‌.

ಜಿಂಬಾಬ್ವೆ: ಇನೋಸೆಂಟ್‌, ಮಧವೆರೆ, ಬೆನೆಟ್‌, ಮೈರ್ಸ್‌, ಸಿಕಂದರ್‌(ನಾಯಕ), ಮಡಂಡೆ, ಕ್ಯಾಂಪ್‌ಬೆಲ್‌, ಮಸಕಜ, ಜೊಂಗ್ವೆ, ಮುಜರಬಾನಿ, ಚಟಾರ.

ಪಂದ್ಯ: ಸಂಜೆ 4.30ಕ್ಕೆ(ಭಾರತೀಯ ಕಾಲಮಾನ)
ನೇರಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್, ಸೋನಿ ಲೈವ್.