2024ರ ಮಹಿಳಾ ಏಷ್ಯಾ ಕಪ್​​ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 7 ವಿಕೆಟ್​ಗಳ ಗೆಲುವು ಸಾಧಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಪಾಕ್, ಟೀಂ ಇಂಡಿಯಾಗೆ 109 ರನ್​​ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಹರ್ಮನ್‌ಪ್ರೀತ್ ಕೌರ್ ಪಡೆ ಟೀಮ್ ಇಂಡಿಯಾ ಕೇವಲ 14.1 ಓವರ್​ನಲ್ಲಿ ಗೆಲುವು ದಾಖಲಿಸಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ್ದ ಪಾಕಿಸ್ತಾನ 108 ರನ್‌ಗಳಿಗೆ ಆಲೌಟ್ ಆಯಿತು. ಟೀಂ ಇಂಡಿಯಾ ಪರ ದೀಪ್ತಿ ಹಾಗೂ ರೇಣುಕಾ ಮಾರಕ ಬೌಲಿಂಗ್ ಮಾಡಿದರು. ದೀಪ್ತಿ 4 ಓವರ್ ಗಳಲ್ಲಿ 20 ರನ್ ನೀಡಿ 3 ವಿಕೆಟ್ ಪಡೆದರು. ರೇಣುಕಾ 4 ಓವರ್​ಗಳಲ್ಲಿ 14 ರನ್ ನೀಡಿ 2 ವಿಕೆಟ್ ಪಡೆದರು. ಶ್ರೇಯಾಂಕ ಪಾಟೀಲ್ 3.2 ಓವರ್ ಗಳಲ್ಲಿ ಕೇವಲ 14 ರನ್ ನೀಡಿ 2 ವಿಕೆಟ್ ಪಡೆದರು. ಪೂಜಾ 4 ಓವರ್​​ಗಳಲ್ಲಿ 31 ರನ್ ನೀಡಿ 2 ವಿಕೆಟ್ ಪಡೆದರು.

ಇನ್ನು 109 ರನ್​ಗಳ ಗುರಿ ಬೆನ್ನು ಹತ್ತಿದ ಭಾರತ, ಅದ್ಭುತ ಆರಂಭ ಪಡೆಯಿತು. ಶಫಾಲಿ ವರ್ಮಾ 29 ಬಾಲ್​ನಲ್ಲಿ 40 ರನ್​ಭಾರಿಸಿದ್ರು. . ಹೇಮಲತಾ 14 ರನ್​ಗಳಿಸಿ ಔಟ್ ಆದರೆ, ಕ್ಯಾಪ್ಟನ್ ಹರ್ಮನ್ ಪ್ರೀತ್ ಕೌರ್ 5 ಹಾಗೂ ಜೆಮಿ 3 ರನ್​ಗಳಿಸಿ ತಂಡವನ್ನು ಗೆಲ್ಲಿಸಿಕೊಟ್ಟರು. ಭಾರತ 14.1 ಓವರ್​ನಲ್ಲಿ ಮೂರು ವಿಕೆಟ್ ಕಳೆದುಕೊಂಡು ಗೆಲುವು ಬೀರಿತು.