ಶ್ರೀಲಂಕಾ: ಇಂದು ನಡೆಯುವ 9ನೇ ಆವೃತ್ತಿಯ ಮಹಿಳಾ ಏಷ್ಯಾಕಪ್ ಫೈನಲ್ ಪಂದ್ಯದಲ್ಲಿ ಆತಿಥೇಯ ಶ್ರೀಲಂಕಾ ಮತ್ತು ಹಾಲಿ ಚಾಂಪಿಯನ್ ಭಾರತ ಮುಖಾಮುಖಿಯಾಗಲಿವೆ. 7 ಬಾರಿಯ ಚಾಂಪುಯನ್ ಪಟ್ಟ ವನ್ನು ತನ್ನದಾಗಿಸಿಕೊಳ್ಳುವ ಭರವಸೆಯಲ್ಲಿ ಮುನ್ನುಗ್ಗಿದೆ.ಅತ್ತ ಲಂಕಾ ಚೊಚ್ಚಲ ಪ್ರಶಸ್ತಿ ಗೆಲ್ಲುವ ಇದಾರೆಯಲ್ಲಿದೆ.
ಭಾರತ ಪರ ಬ್ಯಾಟಿಂಗ್ನಲ್ಲಿ ಆರಂಭಿಕ ಆಟಗಾರ್ತಿಯರಾದ ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಎಲ್ಲ ಪಂದ್ಯಗಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರಿದ್ದಾರೆ. ಶಫಾಲಿ 184 ರನ್ ಗಳಿಸಿ ಕೂಟದ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಬೌಲಿಂಗ್ ವಿಭಾಗ ತುಂಬಾನೆ ಘಾತಕವಾಗಿದೆ. ಸ್ಪಿನ್ನ್ ಮತ್ತು ವೇಗದ ವಿಭಾಗದಲ್ಲಿ ಸಮತೋಲಿತವಾಗಿದೆ. ರಾಧಾ ಯಾದವ್, ಆಲ್ರೌಂಡರ್ ದೀಪ್ತಿ ಶರ್ಮಾ ತಂಡದ ಸ್ಪಿನ್ನರ್ಗಳಾದರೆ, ವೇಗಿ ರೇಣುಕಾ ಸಿಂಗ್ ಮತ್ತು ಪೂಜಾ ವಸ್ತ್ರಾಕರ್ ವೇಗಿಗಳಾಗಿದ್ದಾರೆ.

