ದಾವಣಗೆರೆ: 2026ರ ಟಿ20 ವಿಶ್ವಕಪ್ ಕದನ ಈಗಾಗಲೇ ರಂಗೇರಿದ್ದು, ಫೆ.15 ಭಾರತ & ಪಾಕಿಸ್ತಾನ ನಡುವೆ ಐಸಿಸಿ ಟಿ20 ವಿಶ್ವಕಪ್ ನಡೆಯಲಿದೆ. ಈ ಬಗ್ಗೆ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್, ನಿಮಗೆ ನಾಚಿಕೆ ಮಾನ, ಮರ್ಯಾದೆ ಇದ್ರೆ ಭಾರತ-ಪಾಕ್ ಕ್ರಿಕೆಟ್ ಪಂದ್ಯ ಬಹಿಷ್ಕರಿಸಿ ಎಂದು ಆಗ್ರಹಿಸಿದ್ದಾರೆ.

ಪೆಹಲ್ಗಾಮ್ ನಲ್ಲಿ ಮೃತಪಟ್ಟ ಅಮಾಯಕ ಕುಟುಂಬಸ್ಥರು ಇನ್ನೂ ದುಃಖದಿಂದ ಹೊರಬಂದಿಲ್ಲ. ಆದ್ರೆ ಕೇವಲ ಆದಾಯಗಳಿಕೆ ದೃಷ್ಟಿಯಿಂದ ಮತ್ತೆ ಪಾಕಿಸ್ತಾನದ ಜೊತೆ ಕ್ರಿಕೆಟ್ ಆಡುವುದು ಸರಿಯಲ್ಲ ಎಂದಿದ್ದಾರೆ.

ಕಾಶ್ಮೀರದ ಪೆಹಲ್ಗಾಮ್‌ ಉಗ್ರರ ದಾಳಿಯಲ್ಲಿ ಮೃತಪಟ್ಟ 26 ಅಮಾಯಕರ ಪೈಕಿ ನಿಮ್ಮ ಭಾರತೀಯ ಕ್ರಿಕೆಟ್ ಆಟಗಾರರು ಕೂಡ ಬಲಿಯಾಗಿದ್ರೆ, ಆಗ ನಿಮಗೆ ಆ ನೋವು ಅರ್ಥವಾಗುತ್ತಿತ್ತು ಎಂದು ವಾಗ್ದಾಳಿ ನಡೆಸಿದ್ದಾರೆ. ಐಸಿಸಿ ಮುಖ್ಯಸ್ಥನಾಗಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರ ಮಗನೇ ಇದ್ದಾರೆ. ಆದ್ರೂ ಬುದ್ದಿ ಸ್ವಾಭಿಮಾನ ಬೇಡವೇ..? ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.