Categories: ಕ್ರೀಡೆ

ಏಕದಿನ ವಿಶ್ವಕಪ್ 2023: ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಇಂಗ್ಲೆಂಡ್

ಏಕದಿನ ವಿಶ್ವಕಪ್ 2023ರ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡ ಹೊಸ ವಿಶ್ವ ದಾಖಲೆ ನಿರ್ಮಿಸಿದೆ. ಅದು ಕೂಡ ಏಕದಿನ ಕ್ರಿಕೆಟ್ ಇತಿಹಾಸದಲ್ಲೇ ಯಾವ ತಂಡದಿಂದಲೂ ಸಾಧ್ಯವಾಗದ ದಾಖಲೆ ಎಂಬುದು ವಿಶೇಷ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲೆಂಡ್ ಬೌಲಿಂಗ್ ಆಯ್ದುಕೊಂಡಿತು. ಅದರಂತೆ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಉತ್ತಮ ಆರಂಭ ಪಡೆದಿರಲಿಲ್ಲ.

ಆರಂಭಿಕ ಆಟಗಾರ ಡೇವಿಡ್ ಮಲಾನ್ 14 ರನ್​ ಗಳಿಸಿ ಔಟಾದರೆ, ಜಾನಿ ಬೈರ್​ಸ್ಟೋವ್ 33 ರನ್​ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಆದರೆ ಜಾನಿ ಬೈರ್​ಸ್ಟೋವ್- 33., ಡೇವಿಡ್ ಮಲಾನ್- 14., ಜೋ ರೂಟ್- 77., ಹ್ಯಾರಿ ಬ್ರೂಕ್- 25., ಮೊಯೀನ್ ಅಲಿ- 11., ಜೋಸ್ ಬಟ್ಲರ್- 43., ಲಿಯಾಮ್ ಲಿವಿಂಗ್​ಸ್ಟೋನ್- 20., ಸ್ಯಾಮ್ ಕರನ್- 14., ಕ್ರಿಸ್ ವೋಕ್ಸ್- 11., ಆದಿಲ್ ರಶೀದ್- 15*., ಮಾರ್ಕ್​ ವುಡ್- 13* ರನ್‌ ಕಲೆಹಾಕಿದ್ದಾರೆ.

ವಿಶೇಷ ಎಂದರೆ ಈ ಪಂದ್ಯದಲ್ಲಿ ಇಂಗ್ಲೆಂಡ್​ನ 11 ಬ್ಯಾಟರ್​ಗಳು ಎರಡಂಕಿ ಮೊತ್ತಗಳಿಸಿದ್ದರು. ಇದರೊಂದಿಗೆ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ತಂಡವೊಂದರ ಎಲ್ಲಾ ಆಟಗಾರರು ಎರಡಂಕಿ ರನ್​ಗಳಿಸಿದ ಹೊಸ ದಾಖಲೆ ನಿರ್ಮಾಣವಾಯಿತು. ಅಂದರೆ ಇದುವರೆಗೆ ಯಾವುದೇ ತಂಡದ 11 ಆಟಗಾರರು ಏಕದಿನ ಪಂದ್ಯದಲ್ಲಿ ಡಬಲ್ ಡಿಜಿಟ್ ಸ್ಕೋರ್​ಗಳಿಸಿರಲಿಲ್ಲ. ಇದೀಗ ವಿಶ್ವಕಪ್​ನ ಮೊದಲ ಪಂದ್ಯದಲ್ಲೇ ಇಂಗ್ಲೆಂಡ್ ತಂಡ ಈ ದಾಖಲೆ ನಿರ್ಮಿಸಿರುವುದು ವಿಶೇಷ.

Ashitha S

Recent Posts

ಯುಎಇ ರಾಯಲ್‌ ಮನೆತನದ ಸದಸ್ಯನ ನಿಗೂಢ ಸಾವು

ಯುನೈಟೆಡ್ ಅರಬ್ ಎಮಿರೇಟ್ಸ್‌ನ  ರಾಯಲ್ ಮನೆತನದ ಸದಸ್ಯ ಶೇಖ್ ಹಝಾ ಬಿನ್ ಸುಲ್ತಾನ್ ಬಿನ್ ಜಾಯೆದ್ ಅಲ್ ನಹ್ಯಾನ್ ನಿಗೂಢವಾಗಿ…

15 mins ago

ಬಸವ ಜಯತಿಯ ಅಂಗವಾಗಿ ಆದಿವಾಸಿ ಮಕ್ಕಳಿಗೆ ಹಣ್ಣು-ಹಂಪಲು ವಿತರಣೆ

ಮದರ ತೆರೆಸಾ ಎಜ್ಯುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಹಾಗೂ ನವೀನ ಪಬ್ಲಿಕ್ ಸ್ಕೂಲ್ ವತಿಯಿಂದ ಬೀದರ ನಗರದ ನೌಬಾದ ಹತ್ತಿರ…

39 mins ago

ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥ

ರಾಮನಗರ ತಾಲೂಕಿನ ಕನ್ನಮಂಗಲದೊಡ್ಡಿ ಗ್ರಾಮದಲ್ಲಿ‌ ಗೃಹಪ್ರವೇಶ ಕಾರ್ಯಕ್ರಮದ ಊಟ ಸೇವಿಸಿ 28 ಕ್ಕೂ ಹೆಚ್ಚು ಜನ ಅಸ್ವಸ್ಥರಾದ ಘಟನೆ  ನಡೆದಿದೆ.

54 mins ago

ಮಡಿಕೇರಿ ಜಿಲ್ಲಾಡಳಿತದಿಂದ ಬಸವೇಶ್ವರರ ಹಾಗೂ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ನಾಡಿನ ಸಾಂಸ್ಕೃತಿಕ ನಾಯಕ, ವಿಶ್ವಗುರು ಬಸವೇಶ್ವರರ ಮತ್ತು ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಅವರ ಜಯಂತಿಯನ್ನು ಜಿಲ್ಲಾಡಳಿತ ವತಿಯಿಂದ ಶುಕ್ರವಾರ ಸರಳವಾಗಿ…

2 hours ago

ಗುಂಡ್ಲುಪೇಟೆ: ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವು

ವಿಷಕಾರಿ ಸೊಪ್ಪು ಸೇವಿಸಿ 10 ಕುರಿಗಳು ಸಾವನ್ನಪ್ಪಿರುವ ಘಟನೆ ತಾಲೂಕಿನ ಮಲ್ಲಯ್ಯನಪುರ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.

3 hours ago

ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ: ಮಹೇಶ್ ಟೆಂಗಿನಕಾಯಿ

ಪ್ರಜ್ವಲ್ ಪ್ರಕರಣದಲ್ಲಿ ಪೆನ್ ಡ್ರೈವ್ ಹಿಂದಿನ ಶಕ್ತಿ ಬಹಿರಂಗವಾಗಲಿ' ಎಂದು ಹುಬ್ಬಳ್ಳಿ- ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ…

3 hours ago