ಮುಂಬೈ: ಟಿ20 ವಿಶ್ವಕಪ್ ಮುಕ್ತಾಯದ ಬೆನ್ನಲ್ಲೇ ಐಸಿಸಿ ನೂತನ ಟಿ20 ಶ್ರೇಯಾಂಕ ಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಅಗ್ರಸ್ಥಾನ ಅಲಂಕರಿಸಿದರೆ, ಬೌಲರ್ಗಳ ಪಟ್ಟಿಯಲ್ಲಿ ಇಂಗ್ಲೆಂಡ್ನ ಆದಿಲ್ ರಶೀದ್ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಟಿ20 ಆಲ್ರೌಂಡರ್ ಶ್ರೇಯಾಂಕದಲ್ಲಿ ಟೀಮ್ ಇಂಡಿಯಾದ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಇನ್ನು ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಟಾಪ್-10 ನಲ್ಲಿ ಕೇವಲ ಇಬ್ಬರು ಭಾರತೀಯರು ಮಾತ್ರ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಒಂದೇ ಒಂದು ಪಂದ್ಯವಾಡದ ಯುವ ಎಡಗೈ ದಾಂಡಿಗ ಯಶಸ್ವಿ ಜೈಸ್ವಾಲ್ 7ನೇ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ20 ಬ್ಯಾಟರ್ಗಳ ಟಾಪ್-10 ಪಟ್ಟಿ:
ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ)- 844 ರೇಟಿಂಗ್
ಸೂರ್ಯಕುಮಾರ್ ಯಾದವ್ (ಭಾರತ)- 838 ರೇಟಿಂಗ್
ಫಿಲ್ ಸಾಲ್ಟ್ (ಇಂಗ್ಲೆಂಡ್)- 797 ರೇಟಿಂಗ್
ಬಾಬರ್ ಆಝಂ (ಪಾಕಿಸ್ತಾನ್)- 755 ರೇಟಿಂಗ್
ಮೊಹಮ್ಮದ್ ರಿಝ್ವಾನ್ (ಪಾಕಿಸ್ತಾನ್)- 746 ರೇಟಿಂಗ್
ಜೋಸ್ ಬಟ್ಲರ್ (ಇಂಗ್ಲೆಂಡ್)- 746 ರೇಟಿಂಗ್
ಯಶಸ್ಸಿ ಜೈಸ್ವಾಲ್ (ಭಾರತ)- 659 ರೇಟಿಂಗ್
ಬ್ರಾಂಡನ್ ಕಿಂಗ್ (ವೆಸ್ಟ್ ಇಂಡೀಸ್)- 656 ರೇಟಿಂಗ್
ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್)- 655 ರೇಟಿಂಗ್
ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 646 ರೇಟಿಂಗ್
ಟಿ20 ಬೌಲರ್ಗಳ ಪಟ್ಟಿಯಲ್ಲಿ ಅಗ್ರ ಹತ್ತರಲ್ಲಿ ಭಾರತದ ಇಬ್ಬರು ಬೌಲರ್ಗಳು ಸ್ಥಾನ ಪಡೆದಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಟಾಪ್-10 ನಲ್ಲಿ ಕಾಣಿಸಿಕೊಂಡಿಲ್ಲ. ಟಿ20 ಬೌಲರ್ಗಳ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಬುಮ್ರಾ 12ನೇ ಸ್ಥಾನದಲ್ಲಿದ್ದಾರೆ.
ಟಿ20 ಆಲ್ರೌಂಡರ್ಗಳ ಪಟ್ಟಿಯಲ್ಲಿ ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾರ್ದಿಕ್ ಪಾಂಡ್ಯ ಅಗ್ರಸ್ಥಾನ ಅಲಂಕರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಟಿ20 ಆಲ್ರೌಂಡರ್ಗಳ ಟಾಪ್-10 ಪಟ್ಟಿ:
ಹಾರ್ದಿಕ್ ಪಾಂಡ್ಯ (ಭಾರತ)- 222 ರೇಟಿಂಗ್
ವನಿಂದು ಹಸರಂಗ (ಶ್ರೀಲಂಕಾ)- 222 ರೇಟಿಂಗ್
ಮಾರ್ಕಸ್ ಸ್ಟೋಯಿನಿಸ್ (ಆಸ್ಟ್ರೇಲಿಯಾ)- 211 ರೇಟಿಂಗ್
ಸಿಕಂದರ್ ರಾಝ (ಝಿಂಬಾಬ್ವೆ)- 210 ರೇಟಿಂಗ್
ಶಕೀಬ್ ಅಲ್ ಹಸನ್ (ಬಾಂಗ್ಲಾದೇಶ್)- 206 ರೇಟಿಂಗ್
ಮೊಹಮ್ಮದ್ ನಬಿ (ಅಫ್ಘಾನಿಸ್ತಾನ್)- 205 ರೇಟಿಂಗ್
ದೀಪೇಂದ್ರ ಸಿಂಗ್ ಅರೀ (ನೇಪಾಳ)- 199 ರೇಟಿಂಗ್
ಲಿಯಾಮ್ ಲಿವಿಂಗ್ಸ್ಟೋನ್ (ಇಂಗ್ಲೆಂಡ್)- 187 ರೇಟಿಂಗ್
ಐಡೆನ್ ಮಾರ್ಕ್ರಾಮ್ (ಸೌತ್ ಆಫ್ರಿಕಾ)- 186 ರೇಟಿಂಗ್
ಮೊಯೀನ್ ಅಲಿ (ಇಂಗ್ಲೆಂಡ್)- 174 ರೇಟಿಂಗ್
ಟಿ20 ಬೌಲರ್ಗಳ ಟಾಪ್-10 ಪಟ್ಟಿ:
ಆದಿಲ್ ರಶೀದ್ (ಇಂಗ್ಲೆಂಡ್)- 718 ರೇಟಿಂಗ್
ಅನ್ರಿಕ್ ನೋಕಿಯಾ (ಸೌತ್ ಆಫ್ರಿಕಾ)- 675 ರೇಟಿಂಗ್
ವನಿಂದು ಹಸರಂಗ (ಶ್ರೀಲಂಕಾ)- 674 ರೇಟಿಂಗ್
ರಶೀದ್ ಖಾನ್ (ಅಫ್ಘಾನಿಸ್ತಾನ್)- 668 ರೇಟಿಂಗ್
ಜೋಶ್ ಹ್ಯಾಝಲ್ವುಡ್ (ಆಸ್ಟ್ರೇಲಿಯಾ)- 662 ರೇಟಿಂಗ್
ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್)- 659 ರೇಟಿಂಗ್
ಅಕ್ಷರ್ ಪಟೇಲ್ (ಭಾರತ)- 657 ರೇಟಿಂಗ್
ಆ್ಯಡಂ ಝಂಪಾ (ಆಸ್ಟ್ರೇಲಿಯಾ)- 654 ರೇಟಿಂಗ್
ಕುಲ್ದೀಪ್ ಯಾದವ್ (ಭಾರತ)- 654 ರೇಟಿಂಗ್
ಫಝಲ್ಹಕ್ ಫಾರೂಖಿ (ಅಫ್ಘಾನಿಸ್ತಾನ್)- 645 ರೇಟಿಂಗ್

