ಲಂಡನ್: ಇಂಗ್ಲೆಂಡ್ ನ ಮಾಜಿ ಕ್ರಿಕೆಟಿಗ ಗ್ರಹಾಂ ಥಾರ್ಪ್ ಆತ್ಮಹತ್ಯೆಗೆ ಶರಣಾಗಿದ್ದು, ಅವರು ಆತಂಕ ಮತ್ತು ಖಿನ್ನತೆಯೊಂದಿಗೆ ವರ್ಷಗಳ ಸುದೀರ್ಘ ಹೋರಾಟ ನಡೆಸುತ್ತಿದ್ದರು ಎಂದು ಅವರ ಪತ್ನಿ ಬಹಿರಂಗಪಡಿಸಿದ್ದಾರೆ.
55ನೇ ವಯಸ್ಸಿನಲ್ಲಿ ಥೋರ್ಪ್ ಅವರ ನಿಧನವನ್ನ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಖಚಿತ ಪಡೆಸಿದೆ. ತೀವ್ರ ಖಿನ್ನತೆಯಿಂದ ಮತ್ತು ಆತಂಕದಿಂದ ಬಳಲುತ್ತಿದ್ದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ಪತ್ನಿ ಅಮಂಡಾ ಮತ್ತು ಮಗಳು ಕಿಟ್ಟಿ ಇಂದು ತಿಳಿಸಿದ್ದಾರೆ.

