ಮುಂಬೈ: ಭಾರತ ತಂಡಕ್ಕೆ 17 ವರ್ಷಗಳ ಬಳಿಕ ಟಿ20 ವಿಶ್ವಕಪ್ ಗೆದ್ದುಕೊಟ್ಟ ಕೋಚ್ ರಾಹುಲ್ ದ್ರಾವಿಡ್ಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತರತ್ನ’ ನೀಡಿ ಗೌರವಿಸಬೇಕೆಂದು ಮಾಜಿ ನಾಯಕ ಸುನೀಲ್ ಗಾವಸ್ಕರ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
‘ದ್ರಾವಿಡ್ ಸಾಧನೆ ದೇಶದ ಎಲ್ಲರಿಗೂ ಸಂತೋಷ ತಂದಿದೆ. ಭಾರತೀಯ ಕ್ರಿಕೆಟ್ಗೆ ಅವರು ಆಟಗಾರ ಮತ್ತು ಕೋಚ್ ಆಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಹೀಗಾಗಿ ಅವರು ದೇಶದ ಅತ್ಯುನ್ನತ ಗೌರವಕ್ಕೆ ಅರ್ಹರಾಗಿದ್ದಾರೆ. ಜನಸಾಮಾನ್ಯರಿಂದ ಹಿಡಿದು ಎಲ್ಲರೂ ನನ್ನ ಈ ಮಾತಿಗೆ ಧ್ವನಿಗೂಡಿಸಬೇಕು. ‘ಭಾರತರತ್ನ ರಾಹುಲ್ ಶರದ್ ದ್ರಾವಿಡ್’ ಎಂಬುದನ್ನು ಕೇಳಲು ಆಹ್ಲಾದಕರ ಎನಿಸುತ್ತಿದೆ’ ಎಂದು ಗಾವಸ್ಕರ್ ಪತ್ರಿಕಾ ಅಂಕಣವೊಂದರಲ್ಲಿ ಬರೆದಿದ್ದಾರೆ.

