ಮುಂಬೈ: ಟೀಮ್ ಇಂಡಿಯಾದ ನೂತನ ಹೆಡ್ ಕೋಚ್ ಗೌತಮ್ ಗಂಭೀರ್ ಮೊದಲ ಸೆಲೆಕ್ಷನ್ ಮೀಟಿಂಗ್ನಲ್ಲೇ ಮೇಲುಗೈ ಸಾಧಿಸಿದ್ದಾರೆ. ಗಂಭೀರ್ ಬಿಗಿಪಟ್ಟಿಗೆ ಕಿಂಗ್ ಕೊಹ್ಲಿಯೇ ತಲೆಬಾಗಿದ್ರೆ, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯಗೆ ಶಾಕ್ ಎದುರಾಗಿದೆ. ಟೀಮ್ ಸೆಲೆಕ್ಷನ್ ಮಾಡಿದ್ದು ಸೆಲೆಕ್ಷನ್ ಕಮಿಟಿಯಾದ್ರೂ, ಆಯ್ಕೆ ವಿಚಾರದಲ್ಲಿ ಗಂಭೀರ್ ಗೇಮ್ ಆಡಿದ್ದಾರೆ. ಇದರಿಂದ ಕೊಹ್ಲಿ ಬಾಗಿದ್ದಾರೆ.
ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಸೀನಿಯರ್ಸ್ ರೆಸ್ಟ್ ಬಯಸಿದ್ರು. ಗೌತಮ್ ಗಂಭೀರ್ ಮುಂಬರೋ ಚಾಂಪಿಯನ್ಸ್ ಟ್ರೋಫಿ ದೃಷ್ಟಿಯಿಂದ ಸೀನಿಯರ್ಸ್ ಆಡಲೇಬೇಕು ಬಿಗಿ ಪಟ್ಟು ಹಿಡಿದಿದ್ರು. ಕೊನೆಗೂ ಗೌತಿ ಒತ್ತಾಯಕ್ಕೆ ಸೀನಿಯರ್ಸ್ ಮಣಿದಿದ್ದಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕದಿನ ಸರಣಿಯನ್ನಾಡಲು ಜೈ ಎಂದಿದ್ದಾರೆ.
ರೋಹಿತ್ ಶರ್ಮಾ ಬಳಿಕ ಕೆ.ಎಲ್ ರಾಹುಲ್ ಹಾಗೂ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ರು. ಗೌತಮ್ ಗಂಭೀರ್ ಇಬ್ಬರ ಕನಸಿಗೆ ತಣ್ಣೀರೆರೆಚಿದ್ದಾರೆ. ಟಿ20 ನಾಯಕತ್ವವನ್ನ ಸೂರ್ಯಕುಮಾರ್ಗೆ ನೀಡಿ ಶಾಕ್ ಕೊಟ್ಟಿದ್ದಾರೆ.

