ಭಾರತ ಮತ್ತು ಜಿಂಬಾಬ್ವೆ ನಡುವಿನ ನಾಲ್ಕನೇ ಟಿ20 ಪಂದ್ಯ ನಡೆಯುತ್ತಿದೆ. ಹರಾರೆ ಸ್ಫೋರ್ಟ್ಸ್​​ ಕ್ಲಬ್​ನಲ್ಲಿ ಈ ಪಂದ್ಯ ಏರ್ಪಟ್ಟಿದೆ. ಮೊದಲಿಗೆ ಟಾಸ್​ ಗೆದ್ದ ಇಂಡಿಯಾ ಬೌಲಿಂಗ್​ ಆಯ್ಕೆ ಮಾಡಿದೆ.  ಜಿಂಬಾಬ್ವೆ ತಂಡ ಬ್ಯಾಟಿಂಗ್​ ಇಳಿದು 152 ರನ್​ ಟಾರ್ಗೆಟ್​ ನೀಡಿದೆ.

ಓಪನಿಂಗ್​ ಬ್ಯಾಟ್ಸ್​ಮನ್​ ಆಗಿ ಮೈದಾನಕ್ಕಿಳಿದ ವೆಸ್ಲಿ ಮಾಧೆವೆರೆ ಮತ್ತು ತಡಿವಾನಾಶೆ ಮರುಮಣಿ ಪಾರ್ಟರ್​ಶಿಪ್​ನಲ್ಲಿ ಬ್ಯಾಟ್​ ಮಾಡಲು ಮುಂದಾದರು. 24 ಬಾಲ್​ನಲ್ಲಿ 4 ಬೌಂಡರಿ ಜೊತೆಗೆ 25 ರನ್​ ಬಾರಿಸಿ ವೆಸ್ಲಿ ಔಟ್​ ಆದರು. ಅತ್ತ ಮರುಮಣಿ 31 ಎಸೆತಕ್ಕೆ 3 ಬೌಂಡರಿ ಬಾರಿಸಿ 32 ರನ್​ಗೆ ವಿಕೆಟ್​ ಒಪ್ಪಿಸಿದರು.

ಬ್ರಿಯಾನ್​ ಬೆನೆಟ್​​ 9 ರನ್​ ಮತ್ತು ಜೋನಾಥನ್​ ಕ್ಯಾಂಪ್ಬೆಲ್​ 3 ರನ್​ಗೆ ಔಟ್​ ಆದರು. ಆದರೆ ಜಿಂಬಾಬ್ವೆ ತಂಡದ ನಾಯಕ ಸಿಕಂದರ್​ ರಾಜಾ 28 ಬಾಲ್​ಗೆ 2 ಬೌಂಡರಿ ಮತ್ತು 3 ಸಿಕ್ಸ್​ ಸೇರಿ 46 ರನ್​ ಬಾರಿಸಿದರೆ. ಡಿಯೋನ್​ ಮೈಯರ್ಸ್​ 13 ಬಾಲ್​ಗೆ 12 ರನ್​ ಬಾರಿಸಿ ಔಟ್​​ ಆದರು.

ಬಳಿಕ ಕ್ಲೈವ್​ ಮತ್ತು ಫರಾಜ್​ ಮೈದಾನಕ್ಕಿಳಿದರು. ಕ್ಲೈವ್​ 7 ರನ್​ಗೆ ಔಟ್​​ ಆದರೆ ಫರಾಜ್​ 3 ರನ್​ ಬಾರಿಸುವ ಮೂಲಕ ಟೀಂ ಇಂಡಿಯಾಗೆ 152 ರನ್​ಗಳ ಟಾರ್ಗೆಟ್​ ನೀಡಿದರು. ಇನ್ನು ವಾಷಿಂಗ್ಟನ್​ ಸುಂದರ್​, ಅಭಿಷೇಕ್​ ಶರ್ಮಾ, ಶಿವಂ ದುಬೆ, ತುಷಾರ್​ ದೇಶಪಾಂಡೆ​ ತಲಾ ಒಂದೊಂದು ವಿಕೆಟ್​ ಕಬಳಿಸಿದರು. ಖಲೀಲ್​ ಅಹ್ಮದ್ 22 ವಿಕೆಟ್​​ ಕಿತ್ತರು. ಸದ್ಯ ಜಿಂಬಾಬ್ವೆ ನೀಡಿದ ಸವಾಲನ್ನು ಟೀಂ ಇಂಡಿಯಾ ತೆಗೆದುಕೊಂಡಿದೆ.