News Karnataka Kannada
Wednesday, May 08 2024
ಕ್ರೀಡೆ

ಬಂಗಾಳ ಕ್ರಿಕೆಟ್‌ ತಂಡದ ಕೋಚ್‌ ಆಗಿ ಟೀಂ ಇಂಡಿಯಾ ಮಾಜಿ ಆಲ್ರೌಂಡರ್‌ ಲಕ್ಷ್ಮಿ ರತನ್ ಶುಕ್ಲಾ ನೇಮಕ

Former India all-rounder Laxmi Ratan Shukla has been appointed as the head coach of the Bengal cricket team.
Photo Credit : Twitter

ಭಾರತ ತಂಡದ ಮಾಜಿ ಆಲ್ರೌಂಡರ್ ಲಕ್ಷ್ಮಿ ರತನ್ ಶುಕ್ಲಾ ಅವರು ಪಶ್ಚಿಮ ಬಂಗಾಳ ರಣಜಿ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇವರ ಜೊತೆಗೆ ಡಬ್ಲ್ಯೂ.ವಿ.ರಾಮನ್ ಅವರನ್ನು ಬ್ಯಾಟಿಂಗ್ ಕೋಚ್ ಆಗಿ ನೇಮಕ ಮಾಡಲಾಗಿದೆ.

ಬಂಗಾಳದ ಕೋಚ್ ಆಗಿದ್ದ ಅರುಣ್‌ ಲಾಲ್‌ ಕೆಲದಿನಗಳ ಹಿಂದೆ ರಾಜೀನಾಮೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬಂಗಾಳ ಕ್ರಿಕೆಟ್‌ ಅಸೋಸಿಯೇಷನ್‌ ಕೊಚ್‌ ಆಯ್ಕೆ ಪ್ರಕ್ರಿಯೆಯನ್ನು ಆರಂಭಿಸಿತ್ತು. ಲಕ್ಷ್ಮಿ ರತನ್ ಶುಕ್ಲಾ ಅವರನ್ನು ನೂತನ ಕೋಚ್‌ ಆಗಿ ಆಯ್ಕೆ ಮಾಡಲಾಗಿದೆ.

ಟೀಂ ಇಂಡಿಯಾ ಪರ ಮೂರು ಏಕದಿನ ಪಂದ್ಯ, 137 ಪ್ರಥಮ ದರ್ಜೆ ಪಂದ್ಯ ಮತ್ತು 141 ಲಿಸ್ಟ್ ʼಎʼ ಪಂದ್ಯಗಳನ್ನು ಆಡಿರುವ 41 ವರ್ಷದ ಶುಕ್ಲಾ, ಬಂಗಾಳ ಅಂಡರ್-23 ತಂಡದ ಆಯ್ಕೆಗಾರರಾಗಿ ಕಾರ್ಯನಿರ್ವಹಿಸಿದ ಅನುಭವವನ್ನೂ ಹೊಂದಿದ್ದಾರೆ.

ಅದಾಗ್ಯೂ, ಕೋಚ್‌ ಆಗಿ ಶುಕ್ಲಾ ಸಿಎಬಿಯ ಮೊದಲ ಆಯ್ಕೆ ಆಗಿರಲಿಲ್ಲ. ಭಾರತದ ಮಾಜಿ ಆರಂಭಿಕ ಆಟಗಾರ ವಾಸಿಂ ಜಾಫರ್ CAB ಯ ಮೊದಲ ಆಯ್ಕೆಯಾಗಿದ್ದರು, ಆದರೆ ಅವರು ಈ ನಡುವೆ ಬಾಂಗ್ಲಾದೇಶ U-19 ತಂಡದ ಕೋಚ್ ಆಗಿ ನೇಮಕವಾಗಿದ್ದಾರೆ.

ಆ ಬಳಿಕ ಮುಂಬೈನ ಮಾಜಿ ಆಲ್ರೌಂಡರ್‌ ಅಭಿಷೇಕ್ ನಾಯರ್ ಅಥವಾ ಆಂಡಿ ಫ್ಲವರ್‌ ರನ್ನು  ತರಬೇತುದಾರನನ್ನು ನೇಮಿಸಿಕೊಳ್ಳುವ ಬಗ್ಗೆ ರಾಜ್ಯ ತಂಡವು ಯೋಚಿಸಿತ್ತು. ಆದರೆ ಅಂತಿಮವಾಗಿ ಶುಕ್ಲಾ ಹಾಗೂ ಅಶೋಕ್ ದಿಂಡಾ ರನ್ನು ಫೈನಲ್‌ ಮಾಡಲಾಗಿತ್ತು. ಬ್ಯಾಟಿಂಗ್‌ ಕೋಚ್‌ ಡಬ್ಲ್ಯೂ.ಬಿ. ರಾಮನ್ ಈ ಹಿಂದೆ ಎರಡು ಅವಧಿಗಳಲ್ಲಿ ಬಂಗಾಳದ ಮುಖ್ಯ ಕೋಚ್ ಆಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು