ಪ್ಯಾರಿಸ್: ಫ್ರೆಂಚ್ ಓಪನ್ ಗ್ಯಾನ್ ಸ್ಲಾಂ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ಫೈನಲ್‌ನಲ್ಲಿ ಭಾನುವಾರ, ಸ್ಪೇನ್‌ನ ಕಾರ್ಲೊಸ್ ಆಲ್ಕರಜ್ ಹಾಗೂ ಜರ್ಮನಿಯ ಅಲೆಕ್ಸಾಂಡರ್ ಜ್ವೆರೆವ್ ಪ್ರಶಸ್ತಿಗಾಗಿ ಸೆಣಸಲಿದ್ದಾರೆ.ಇದೇ ಮೊದಲ ಬಾರಿಗೆ ಟೂರ್ನಿಯಲ್ಲಿ ಇಬ್ಬರೂ ಫೈನಲ್ ಪ್ರವೇಶಿಸಿದ್ದು, ಜೈರೆವ್ ಚೊಚ್ಚಲ ಹಾಗೂ ಆಲ್ಕರಜ್ 3ನೇ ಗ್ಯಾನ್ ಸ್ಲಾಂ ಟ್ರೋಫಿ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.
ಸೆಮಿಫೈನಲ್‌ನಲ್ಲಿ ಆಲ್ಕರಜ್, ಇಟಲಿಯ ಯಾನ್ನಿಕ್ ಸಿನ್ನರ್ ವಿರುದ್ಧ ಪ್ರಯಾಸದ ಗೆಲುವು ಸಾಧಿಸಿದರೆ, ನಾರ್ವೆಯ ಕ್ಯಾಸ್ಟರ್ ರುಡ್ ವಿರುದ್ಧ ಜ್ವೆರೆವ್ 2-6, 6-2, 6-4, 6-2 ಸೆಟ್ ಗಳಲ್ಲಿ ಜಯಿಸಿ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟರು.

