Categories: ಕ್ರೀಡೆ

ವಿಶ್ವದ ನಂ.1 ಆಟಗಾರ ಮ್ಯಾಗ್ನಸ್ ಗೆ ಸವಾಲೊಡ್ಡುತ್ತಿರುವ ಪ್ರಜ್ಞಾನಂದ ಯಾರು ಗೊತ್ತ ?

ತಮಿಳುನಾಡು: ಐದು ಬಾರಿ ವಿಶ್ವ ಚೆಸ್​ ಚಾಂಪಿಯನ್ ಆದ ಪ್ರಜ್ಞಾನಂದನ ಪೂರ್ಣ ಹೆಸರು ರಮೇಶ್​ ಬಾಬು ಪ್ರಜ್ಞಾನಂದನ.  ಆರ್ ಪ್ರಜ್ಞಾನಂದ ಭಾರತೀಯ ಚೆಸ್ ಆಟಗಾರನಾಗಿದ್ದು, ಆಗಸ್ಟ್ 5, 2005 ರಂದು ತಮಿಳುನಾಡಿನ ಚೆನ್ನೈನಲ್ಲಿ ಜನಿಸಿದರು. ತಂದೆ ರಮೇಶ್​ ಬಾಬು ಟಿಎನ್‍ಎಸ್‍ಸಿ ಬ್ಯಾಂಕ್​ ಮ್ಯಾನೇಜರ್ ಆಗಿದ್ದು, ತಾಯಿ ನಾಗಲಕ್ಷ್ಮಿ ಗೃಹಿಣಿಯಾಗಿದ್ದಾರೆ. ಪ್ರಜ್ಞಾನಂದ ಅವರ ಕೋಚ್ ರಮೇಶ್ ಆರ್​ಬಿ ಆಗಿದ್ದಾರೆ.

ವುಮನ್ ಗ್ರ್ಯಾಂಡ್ ಮಾಸ್ಟರ್ ಮತ್ತು ಇಂಟರ್​ನ್ಯಾಷನಲ್​ ಮಾಸ್ಟರ್ ಆರ್ ವೈಶಾಲಿ ಅವರ ಕಿರಿಯ ಸಹೋದರನೇ ಈ ಪ್ರಜ್ಞಾನಂದ.

ಪ್ರಜ್ಞಾನಂದ 2013 ರಲ್ಲಿ 8 ವರ್ಷದೊಳಗಿನವರ ವರ್ಲ್ಡ್​ ಯೂತ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ, ಏಳನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015 ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ.  2017 ರಲ್ಲಿ, ಮೊದಲ ಬಾರಿಗೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದರು. ಇದಲ್ಲದೇ ತಮ್ಮ ಚಿಕ್ಕ ವಯಸ್ಸಿನಲ್ಲೇ ಹಲವು ದಾಖಲೆಗಳನ್ನು ಮಾಡಿದ್ದಾರೆ.

ಇವರಿಗಿದ್ದ ಹಣಕಾಸಿನ ಅಡೆತಡೆಗಳಿಂದ ಚೆಸ್ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಇದಕ್ಕಾಗಿ ಅವರು ತಮ್ಮ ಸಹೋದರಿಯಿಂದ ಚೆಸ್ ಆಟವನ್ನು ಕಲಿಯುತ್ತಿದ್ದರಂತೆ.

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ತಮ್ಮ ಚಿಕ್ಕ ವಯಸ್ಸಿನಲ್ಲೇ ಪ್ರತಿಭೆಯನ್ನು ಸಾಬೀತುಪಡಿಸಿದರು. 2022 ರಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದರು.

ಈಗ ತಮಿಳುನಾಡಿನ 18ರ ಪೋರ ಪ್ರಜ್ಞಾನಂದ ಮುಂದೆ ವಿಶ್ವದ ನಂಬರ್ 1 ಚೆಸ್ ಆಟಗಾರ 32 ವರ್ಷದ ಮ್ಯಾಗ್ನಸ್ ಕಾರ್ಲ್‌ಸೆನ್​ ಆಟ ಏನು ಅಂದರೆ ಏನೂ ನಡೆಯುತ್ತಿಲ್ಲ. ಕಳೆದ ದಿನ ನಡೆದ ಫೈನಲ್​ ಪಂದ್ಯದ ಮೊದಲ ಸುತ್ತಿನ ಮ್ಯಾಚ್​ನಲ್ಲಿ ಕಾರ್ಲ್​ಸೆನ್​ಗೆ ಟಕ್ಕರ್ ಕೊಟ್ಟ ಪ್ರಜ್ಞಾನಂದ ಪಂದ್ಯವನ್ನು ಡ್ರಾ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಎಂತೆಂತಾ ಘಟಾನುಘಟಿಗಳನ್ನೇ ಚದುರಂಗದಲ್ಲಿ ಚೆಕ್​ಮೆಟ್​ ಕೊಟ್ಟು ಓಡಿಸಿ ಕಾರ್ಲ್​ಸೆನ್ ನಂಬರ್ 1 ಪಟ್ಟ ಅಲಂಕರಿಸಿದ್ದರು. ಇಂತಹ ಆಟಗಾರ, ಭಾರತದ ಯುವ ಪ್ರತಿಭೆ ಪ್ರಜ್ಞಾನಂದ ವಿರುದ್ಧ ಚೆಸ್​ ಆಡಲು ಬೆವರಿಳಿದು ಹೋಗಿದ್ದಾರೆ.

2022 ಫೆಬ್ರವರಿ 22 ರಂದು ತನ್ನ 16ನೇ ವಯಸ್ಸಿನಲ್ಲಿ ಏರ್‌ಥಿಂಗ್ಸ್ ಮಾಸ್ಟರ್ಸ್ ಱಪಿಡ್ ಚೆಸ್ ಟೂರ್ನ್​ಮೆಂಟ್‌ನಲ್ಲಿ ಕಾರ್ಲ್‌ಸೆನ್​ರನ್ನು ಸೋಲಿಸಿದ ಅತ್ಯಂತ ಕಿರಿಯ ಆಟಗಾರ ಎನಿಸಿದ್ದಾರೆ.

Ashitha S

Recent Posts

ಅಕ್ಷಯ ತೃತೀಯ ದಿನದಂದು ಚಿನ್ನ, ಬೆಳ್ಳಿ ದರ ಪಟ್ಟಿ ಹೀಗಿದೆ!

ಇಂದು ಅಕ್ಷಯ ತೃತೀಯ ದಿನವಾಗಿದ್ದು, ಚಿನ್ನದ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ. ಸತತ ಏರಿಕೆಯ ಬಳಿಕ ಎರಡು ದಿನ ಸತತ ಬೆಲೆ…

9 mins ago

ಚಿರಂಜೀವಿ, ನಟಿ ವೈಜಯಂತಿಮಾಲಾ ಸೇರಿ ಹಲವು ಸಾಧಕರಿಗೆ ಪದ್ಮ ಪ್ರಶಸ್ತಿ ಪ್ರದಾನ

ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ,  ಸುಪ್ರೀಂ ಕೋರ್ಟ್‍ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…

8 hours ago

ಏರ್ ಇಂಡಿಯಾ ಸಿಬ್ಬಂದಿಯ ಪ್ರತಿಭಟನೆ ಅಂತ್ಯ: ಕೆಲಸಕ್ಕೆ ಮರಳುವಂತೆ ಕಂಪನಿ ಆದೇಶ

ಏರ್ ಇಂಡಿಯಾ  ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ 85 ವಿಮಾನಗಳನ್ನು…

8 hours ago

ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಜಿಲ್ಲಾ ಪೋಲಿಸ್ ಅಧೀಕ್ಷಕರಿಂದ ಅಭಿನಂದನೆ

ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…

8 hours ago

ಬೀದರ್: ರಾಜಿ ಸಂಧಾನಕ್ಕೆ ಒಂದಾದ ಮೂವರು ದಂಪತಿ

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.

8 hours ago

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

10 hours ago