ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ನಡೆಯುತ್ತಿರುವ ಡೈಮಂಡ್ ಲೀಗ್ 2023 ರ ಫೈನಲ್ನಲ್ಲಿ ತಮ್ಮ ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಮೆರಿಕದ ಯುಜೀನ್ನಲ್ಲಿ ನಡೆದ ಪ್ರಶಸ್ತಿ ಪಂದ್ಯದಲ್ಲಿ ನೀರಜ್ 2ನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.
ನೀರಜ್, ತಮ್ಮ ೨ನೇ ಯತ್ನದಲ್ಲಿ 83.80 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗುವ ಅವಕಾಶದಿಂದ ವಂಚಿತರಾಗಿ ಎರಡನೇ ಸ್ಥಾನ ಪಡೆದರುಕೊಂಡರು. ಇನ್ನು ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಚ್ 84.24 ಮೀಟರ್ ಜಾವೆಲಿನ್ ಎಸೆದು ಪ್ರಶಸ್ತಿ ಗೆದ್ದರು.
ಇವರೊಂದಿಗೆ ಫಿನ್ಲ್ಯಾಂಡ್ನ ಆಲಿವರ್ ಹೆಲಾಂಡರ್ 83.74 ಮೀಟರ್ ಜಾವೆಲಿನ್ ಎಸೆದು ಮೂರನೇ ಸ್ಥಾನ ಕಾಯ್ದುಕೊಂಡರು. ಕಳೆದ ವರ್ಷ ನೀರಜ್ ಡೈಮಂಡ್ ಲೀಗ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅಲ್ಲದೆ ಕಳೆದ ತಿಂಗಳು ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮೊದಲ ಬಾರಿಗೆ ಚಿನ್ನದ ಪದಕಕ್ಕೆ ನೀರಜ್ ಮುತ್ತಿಕ್ಕಿದ್ದರು.