ಜರ್ಮನಿಯಲ್ಲಿ ನಡೆಯುತ್ತಿರುವ ಯುರೋ ಕಪ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಫ್ರಾನ್ಸ್ ತಂಡ ಜಯಭೇರಿ ಭಾರಿಸಿದ್ದು ಪೋರ್ಚುಗಲ್ ಹೀನಾಯಬಸೋಲು ಅನುಭವಿಸಿದೆ. ಈ ಗೆಲುವಿನೊಂದಿಗೆ ಫ್ರಾನ್ಸ್ ಸೆಮಿಫೈನಲ್ಗೇರಿದರೆ, ಇತ್ತ ಕ್ರಿಸ್ಟಿಯಾನೊ ರೊನಾಲ್ಡೊ ಮುಂದಾಳತ್ವದ ಪೋರ್ಚುಗಲ್ ತಂಡ ಟೂರ್ನಿಯಿಂದ ಹೊರಬಿದ್ದಿದೆ.
ಹ್ಯಾಂಬರ್ಗ್ನ ವೋಕ್ಸ್ಪಾರ್ಕ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಗಿತ್ತು. ಇದರ ನಡುವೆ ಗಾಯಗೊಂಡ ಎಂಬಾಪ್ಪೆ ಮೈದಾನ ತೊರೆದರು. ಈ ಅವಕಾಶವನ್ನು ಬಳಸಿಕೊಳ್ಳಲು ಯತ್ನಿಸಿದ ಪೋರ್ಚುಗಲ್ ತಂಡಕ್ಕೆ ಹಲವು ಬಾರಿ ಗೋಲುಗಳಿಸುವ ಅವಕಾಶ ಸಿಕ್ಕರೂ, ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ಇದರೊಂದಿಗೆ ಮೊದಲಾರ್ಧವು ಯಾವುದೇ ಗೋಲುಗಳಿಲ್ಲದೆ ಅಂತ್ಯವಾಯಿತು.
ಈ ಗೆಲುವಿನೊಂದಿಗೆ ಫ್ರಾನ್ಸ್ ತಂಡವು ಯುರೋ ಕಪ್ 2024ರ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ. ಮತ್ತೊಂದೆಡೆ ಯುರೋ ಕಪ್ನೊಂದಿಗೆ ವಿದಾಯ ಹೇಳುವ ನಿರೀಕ್ಷೆಯಲ್ಲಿದ್ದ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಕನಸು ಭಗ್ನಗೊಂಡಿದೆ.

