ನಮೀಬಿಯಾ ತಂಡದ ಸ್ಟಾರ್ ಆಲ್ರೌಂಡರ್ ಡೇವಿಡ್ ವೀಝ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆಂಟಿಗುವಾದ ನಾರ್ತ್ ಸೌಂಡ್ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಸ್ಟೇಡಿಯಂನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಬಾರಿ ಕಣಕ್ಕಿಳಿಯುವ ಮೂಲಕ ವೀಝ ಇಂಟರ್ನ್ಯಾಷನಲ್ ಕ್ರಿಕೆಟ್ ಕೆರಿಯರ್ ಅಂತ್ಯಗೊಳಿಸಿದರು.
2013 ರಿಂದ 2016 ರವರೆಗೆ ಸೌತ್ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದ ವೀಝ ಆ ಬಳಿಕ ನಮೀಬಿಯಾ ಪರ ಹೊಸ ಕೆರಿಯರ್ ಆರಂಭಿಸಿದ್ದರು. ಇದೀಗ ತಮ್ಮ 11 ವರ್ಷಗಳ ಸುದೀರ್ಘ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನಕ್ಕೆ ವಿದಾಯ ಹೇಳಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ, ಕೆಕೆಆರ್ ಪರ ಒಟ್ಟು 18 ಪಂದ್ಯಗಳನ್ನಾಡಿರುವ ಡೇವಿಡ್ ವೀಝ 148 ರನ್ ಹಾಗೂ 16 ವಿಕೆಟ್ ಕಬಳಿಸಿದ್ದಾರೆ. ವಿಶೇಷ ಎಂದರೆ ಎರಡು ದೇಶಗಳನ್ನು ಪ್ರತಿನಿಧಿಸಿ ಐಪಿಎಲ್ನಲ್ಲಿ ಸ್ಥಾನ ಪಡೆದ ಏಕೈಕ ಆಟಗಾರ ಎಂಬ ದಾಖಲೆ ಡೇವಿಡ್ ವೀಝ ಹೆಸರಿನಲ್ಲಿದೆ.
Ad