News Karnataka Kannada
Friday, May 03 2024
ಕ್ರೀಡೆ

ಕಾಮನ್‌ವೆಲ್ತ್ ಗೇಮ್ಸ್‌: ಪೈನಲ್‌ಗೆ ಲಗ್ಗೆಯಿಟ್ಟ ಪುರುಷರ ಹಾಕಿ ತಂಡ

Commonwealth Games 2018: Men's hockey team advances to final
Photo Credit : Wikimedia

ಕಾಮನ್‌ವೆಲ್ತ್ ಗೇಮ್ಸ್‌ನ ಪುರುಷರ ಹಾಕಿ ಸೆಮಿಫೈನಲ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3-2 ಗೋಲುಗಳ ಅಂತರದಿಂದ ರೋಚಕ ಗೆಲುವು ಸಾಧಿಸಿ ಫೈನಲ್‌ ಗೆ ಲಗ್ಗೆ ಇಡುವ ಮೂಲಕ ಭಾರತ ಹಾಕಿ ತಂಡ ಮತ್ತೊಂದು ಪದಕ ಖಚಿತಪಡಿಸಿದೆ.

ಸಾಕಷ್ಟು ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತ ಒಂದು ಗೋಲು ಅಂತರದಲ್ಲಿ ಆಫ್ರಿಕಾವನ್ನು ಮಣಿಸಿ ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿದೆ.

ಭಾರತದ ಪರ ಅಭಿಷೇಕ್ (20ನೇ ನಿಮಿಷ), ಮನದೀಪ್ ಸಿಂಗ್ (28ನೇ ನಿ) ಮತ್ತು ಜುಗ್ರಾಜ್ ಸಿಂಗ್ (58ನೇ ನಿ) ಗೋಲು ಗಳಿಸಿದರೆ, ದಕ್ಷಿಣ ಆಫ್ರಿಕಾ ಪರವಾಗಿ ರಿಯಾನ್ ಜೂಲಿಯಸ್ (33ನೇ) ಮತ್ತು ಮುಸ್ತಫಾ ಕ್ಯಾಸಿಯೆಮ್ (59ನೇ ನಿ.) ಎರಡು ಗೋಲುಗಳನ್ನು ಗಳಿಸಿದರು.

ಭಾನುವಾರ ನಡೆಯಲಿರುವ ಆಸ್ಟ್ರೇಲಿಯ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಭಾರತದ ವಿರುದ್ಧ ಫೈನಲ್‌ನಲ್ಲಿ ಆಡಲಿದೆ. ಸೆಮಿಫೈನಲ್‍ನಲ್ಲಿ ಸೋತ ತಂಡ ಆಫ್ರಿಕಾದೊಂದಿಗೆ ಕಂಚಿನ ಪದಕಕ್ಕಾಗಿ ಸೆಣೆಸಲಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು