ಮುಂಬೈ: ಯುವ ಕ್ರಿಕೆಟಿಗ ಚೇತನ್ ಸಕರಿಯಾ ಹೊಸ ಇನ್ನಿಂಗ್ಸ್​ ಆರಂಭಿಸಿದ್ದಾರೆ. ಇತ್ತೀಚೆಗೆ ಮೇಘನಾ ಜಂಬುಚಾ ಅವರೊಂದಿಗೆ ಸಪ್ತಪದಿ ತುಳಿದಿದ್ದು, ಮದುವೆ ಕ್ಷಣದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ಮದುವೆ ಸಮಾರಂಭದಲ್ಲಿ ಚೇತನ್ ಸಕರಿಯಾ ಮತ್ತು ಮೇಘನಾ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ್ದಾರೆ. ಈ ಫೋಟೋಗಳನ್ನು ನೋಡಿದ ಅಭಿಮಾನಿಗಳು ನವಜೋಡಿಗೆ ಶುಭಕೋರುತ್ತಿದ್ದಾರೆ.

ಮದುವೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಸಕರಿಯಾ.. ‘ಇವತ್ತು ನಾನು ನಿನ್ನವಳಾಗಿದ್ದೇನೆ. ನೀನು ನಾನಾಗಿಬಿಟ್ಟೆ’ ಎಂದು ಬರೆದುಕೊಂಡಿದ್ದಾರೆ. ಭಾರತೀಯ ಕ್ರಿಕೆಟಿಗರು, ಐಪಿಎಲ್ ಸಹೋದ್ಯೋಗಿಗಳು, ಅಭಿಮಾನಿಗಳು ಮತ್ತು ನೆಟಿಜನ್ಸ್ ನವ ಜೋಡಿಗೆ ಶುಭ ಹಾರೈಸಿದ್ದಾರೆ.