ಬಾರ್ಬಡೋಸ್: ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಈ ಬಾರಿ ಮೊದಲ ಪಂದ್ಯ ಇಂದು ನಡೆಯಲಿದ್ದು ಗುಂಪು ಹಂತದಲ್ಲಿ ಬಲಿಷ್ಠ ತಂಡಗಳಿಗೆ ಟಕ್ಕರ್ ಕೊಟ್ಟ ಅಫ್ಘಾನಿಸ್ತಾನ ಇಂದು ಭಾರತದ ಎದುರಾಳಿಯಾಗಲಿದೆ.
ಟೀಂ ಇಂಡಿಯಾದ ಪ್ರಮುಖ ಕೋಚ್ ರಾಹುಲ್ ದ್ರಾವಿಡ್ ಅವರು ಇಂದಿನ ಪಂದ್ಯದಲ್ಲಿ ಆಡುವ ಬಳಗದಲ್ಲಿ ಬದಲಾವಣೆಯ ಬಗ್ಗೆ ಸುಳಿವು ನೀಡಿದ್ದಾರೆ. ಗುಂಪು ಹಂತದ ಪಂದ್ಯಗಳಲ್ಲಿ ಟೀಂ ಇಂಡಿಯಾ ಯಾವುದೇ ಬದಲಾವಣೆ ಮಾಡಿರಲಿಲ್ಲ. ಅಕ್ಷರ್ ಪಟೇಲ್ ಮತ್ತು ರವೀಂದ್ರ ಜಡೇಜಾ ಅವರನ್ನೇ ಮುಖ್ಯ ಸ್ಪಿನ್ನರ್ ಗಳನ್ನಾಗಿ ಆಡಸಿತ್ತು. ಆದರೆ ಇದೀಗ ಕುಲದೀಪ್ ಯಾದವ್ ಅಥವಾ ಯುಜಿವೇಂದ್ರ ಚಾಹಲ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಯೋಚಿಸುತ್ತಿದೆ.
“ಕ್ರಿಕೆಟ್ ತುಂಬಾ ಪರಿಸ್ಥಿತಿ ಅನುಗುಣವಾದ ಆಟವಾಗಿದೆ. ನಿಜವಾದ ಕೌಶಲ್ಯ ಮಟ್ಟಗಳು, ನಿಜವಾದ ಕಾರ್ಯಕ್ಷಮತೆಯ ಮಟ್ಟಗಳು, ಸ್ವೀಕಾರಾರ್ಹ ಕಾರ್ಯಕ್ಷಮತೆಯ ಮಟ್ಟಗಳ ಮೇಲೆ ಮೇಲ್ಮೈ ಅಂತಹ ಪ್ರಭಾವವನ್ನು ಬೀರುವ ಏಕೈಕ ಕ್ರೀಡೆಗಳಲ್ಲಿ ಇದು ಒಂದಾಗಿದೆ” ಎಂದರು.

