2024ರ ಏಷ್ಯನ್ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಗಮನಾರ್ಹ ಸಾಧನೆ ಮಾಡಿದೆ. ಪವರ್‌ಲಿಫ್ಟಿಂಗ್‌ನಲ್ಲಿ ದಿಶಾ ಮೋಹನ್ ಅವರು ಚಿನ್ನದ ಪದಕ ಗೆದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ.

ಕಿರ್ಗಿಸ್ತಾನ್‌ನಲ್ಲಿ ಈ ಬಾರಿಯ ಏಷ್ಯನ್ ಪವರ್‌ಲಿಫ್ಟಿಂಗ್ ಬೆಂಚ್‌ಪ್ರೆಸ್ ಚಾಂಪಿಯನ್‌ಶಿಪ್‌ ನಡೆಯಿತು. 57 ಕೆಜಿ ವಿಭಾಗದಲ್ಲಿ ದಿಶಾ ಮೋಹನ್ ಅಮೋಘ ಸಾಧನೆ ಮಾಡಿ ಭಾರತದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ. ದಿಶಾ ಮೋಹನ್ ಅವರು ಚಿನ್ನದ ಪದಕಕ್ಕೆ ಭಾಜನರಾದರೆ ಮಂಗೋಲಿಯಾದ ಸ್ಪರ್ಧಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. 18 ವರ್ಷದ ದಿಶಾ ಮೋಹನ್ ಅವರು ವಿದ್ಯಾರ್ಥಿಯಾಗಿದ್ದು, 2 ವರ್ಷದಿಂದ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಕಠಿಣ ಪರಿಶ್ರಮ ಹಾಗೂ ಶ್ರದ್ಧೆಯ ಫಲವಾಗಿ ದಿಶಾ ಮೋಹನ್ ಅವರ ಸಾಧನೆಗೆ ಜಾಗತಿಕ ಮನ್ನಣೆ ಸಿಕ್ಕಿದೆ.