ಪ್ಯಾರಿಸ್: ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಮಹಿಳೆಯರ 400 ಮೀಟರ್ ಓಟದಲ್ಲಿ ದೀಪ್ತಿ ಜೀವಾಂಜಿ  ಕಂಚಿನ ಪದಕ ಜಯಿಸಿದ್ದಾರೆ.

ಹೌದು.. ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 16ನೇ ಪದಕ ಲಭಿಸಿದ್ದು, ಮಹಿಳೆಯರ 400 ಮೀಟರ್ ಓಟದಲ್ಲಿ , ದೀಪ್ತಿ ಜೀವಾಂಜಿ ಕಂಚಿ ಪದಕಕ್ಕೆ ಭಾಜನರಾಗಿದ್ದಾರೆ. ಅಂತೆಯೇ ಇದು ಅವರ ಮೊದಲ ಪ್ಯಾರಾಲಿಂಪಿಕ್ ಪದಕವಾಗಿದೆ.

ಅಂತೆಯೇ ಇದು ಪ್ಯಾರಾಲಿಂಪಿಕ್ಸ್‌ನಲ್ಲಿ ಟ್ರ್ಯಾಕ್ ಸ್ಪರ್ಧೆಯಲ್ಲಿ ಭಾರತಕ್ಕೆ 3ನೇ ಪದಕವಾಗಿದೆ, ಇದಕ್ಕೂ ಮುನ್ನ ಪ್ರೀತಿ ಪಾಲ್ ಎರಡು ಕಂಚಿನ ಪದಕಗಳನ್ನು ಗೆದ್ದಿದ್ದರು. ಈ ಪದಕದೊಂದಿಗೆ ಭಾರತ 16 ಪದಕಗಳನ್ನು ಗೆದ್ದು ಪ್ರಸ್ತುತ ಪದಕ ಪಟ್ಟಿಯಲ್ಲಿ 18ನೇ ಸ್ಥಾನದಲ್ಲಿದೆ.