ಇಂಗ್ಲೆಂಡ್ ಸೀಮಿತ ಓವರ್​ಗಳ ತಂಡದ ಮುಖ್ಯ ಕೋಚ್ ಆಗಿ ಬ್ರೆಂಡನ್ ಮೆಕಲಂ  ನೇಮಕವಾಗಿದ್ದಾರೆ. ಇಂಗ್ಲೆಂಡ್ ಟೆಸ್ಟ್ ತಂಡದ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ನ್ಯೂಝಿಲೆಂಡ್​ನ ಮಾಜಿ ನಾಯಕನ್ನು ಇದೀಗ ಏಕದಿನ ಹಾಗೂ ಟಿ20 ತಂಡಗಳ ತರಬೇತುದಾರರಾಗಿ ಆಯ್ಕೆ ಮಾಡಿಕೊಂಡಿರುವುದು ವಿಶೇಷ.

ಇದಕ್ಕೂ ಮೊದಲು ಏಕದಿನ ಮತ್ತು  ಟಿ20 ತಂಡಗಳ ಮುಖ್ಯ ಕೋಚ್ ಆಗಿ ಮ್ಯಾಥ್ಯೂ ಮೋಟ್ ಅವರು ಕಾರ್ಯ ನಿರ್ವಹಿಸಿದ್ದರು.  ಆದರೆ ಕಳೆದ ಏಕದಿನ ವಿಶ್ವಕಪ್ ಹಾಗೂ ಟಿ20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡವು ಕಳಪೆ ಪ್ರದರ್ಶನ ನೀಡಿದ್ದರಿಂದ ಮ್ಯಾಥ್ಯೂ ಮೋಟ್ ಅವರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೆಳಗಿಳಿಸಲಾಗಿದೆ. ಅಲ್ಲದೆ ಟೆಸ್ಟ್ ತಂಡದ ಕೋಚ್ ಆಗಿರುವ ಬ್ರೆಂಡನ್ ಮೆಕಲಂ ಅವರಿಗೆ ಮೂರು ತಂಡಗಳ ಜವಾಬ್ದಾರಿವಹಿಸಲಾಗಿದೆ.