ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಇತ್ತೀಚೆಗೆ ನಡೆದ ಕೋಲ್ಕತ್ತಾ ಆರ್ಜಿ ಕಾರ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ಮಹಿಳಾ ವೈದ್ಯೆಯ ಅತ್ಯಾಚಾರ ಪ್ರಕರಣ ದೇಶವನ್ನೇ ತಲ್ಲಣಗೊಳಿಸಿದೆ.
ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂಬ ಒಕ್ಕೊರಳಿನ ಒತ್ತಾಯ ಜೋರಾಗಿ ಕೇಳಿಬರುತ್ತಿದೆ. ಕ್ರೀಡಾ ಜಗತ್ತು ಕೂಡ ಒತ್ತಾಯಿಸಿದೆ. ಟೀಂ ಇಂಡಿಯಾದ ಆಟಗಾರ ಯುಜ್ವೇಂದ್ರ ಚಹಾಲ್ ಕೂಡ ಈ ಘೋರ ಅಪರಾಧದಲ್ಲಿ ಭಾಗಿಯಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ
ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿರುವ ಯುಜ್ವೇಂದ್ರ ಚಹಾಲ್, ‘ಸಾಯುವ ತನಕ ನೇಣು ಹಾಕ್ತೀರಾ? ಇಲ್ಲ. 90 ಡಿಗ್ರಿಗಳಲ್ಲಿ ಆತನ ಕಾಲು ಮುರಿಯಿರಿ. ಕಾಲರ್ ಬೋನ್ಸ್ ಮುರಿಯಿರಿ. ಖಾಸಗಿ ಭಾಗಗಳಿಗೆ ಗಾಯ ಮಾಡಿ. ಎಲ್ಲಾ ಭಯಾನಕ ಚಿತ್ರಹಿಂಸೆಗಳನ್ನು ಅನುಭವಿಸಲು ಅತ್ಯಾಚಾರಿಯನ್ನು ಜೀವಂತವಾಗಿಡಿ. ನಂತರ ಗಲ್ಲಿಗೇರಿಸಿ’ ಎಂದು ಬರೆದುಕೊಂಡಿದ್ದಾರೆ.
ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದರು, ‘ಇದೊಂದು ಹೇಯ ಘಟನೆ, ಇಂತಹ ಅಪರಾಧಗಳಿಗೆ ಕ್ಷಮೆ ಕೇಳಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ‘ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆ ಎಲ್ಲಬೇಕಾದರೂ ನಡೆಯಬಹುದು. ಆದರೆ ಆಸ್ಪತ್ರೆಯೊಳಗೆ ನಡೆದಿರುವುದು ದುರದೃಷ್ಟಕರ’ ಎಂದು ಗಂಗೂಲಿ ಹೇಳಿದ್ದಾರೆ.

