ನವದೆಹಲಿ: ಭಾರತದ ಹಿರಿಯ ಟೆನಿಸ್ ಆಟಗಾರ ರೋಹನ್ ಬೋಪಣ್ಣ ಮತ್ತು ಸುಮಿತ್ ನಾಗಲ್ ಮುಂದಿನ ತಿಂಗಳು ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.
ಇಬ್ಬರ ನೂತನ ಎಟಿಪಿ ರ್ಯಾಂಕಿಗ್ ನಲ್ಲಿ ಸುಮಿತ್ 18 ಸ್ಥಾನ ಮೇಲೇರಿ 77ನೇ ರ್‍ಯಾಂಕಿಂಗ್ ಪಡೆದ ಕಾರಣ ಅವರಿಗೆ ಒಲಿಂಪಿಕ್ಸ್ ಅರ್ಹತೆ ಲಭಿಸಿದೆ.
ಭಾನುವಾರ ಜರ್ಮನಜಿಯಲ್ಲಿ ನಡೆದ ಹೀಲ್‌ಬ್ರಾನ್ ನೆಕರ್‌ಕಪ್ ಚಾಲೆಂಜರ್ ಫೈನಲ್ನಲ್ಲಿ ಸುಮಿತ್ ಉತ್ತಮ ಪ್ರದರ್ಶನ ನಿಡಿದ್ದು ಎಚ್ಚಿನ ಅಂಕ ಪಡೆದಿದ್ದರು. ಇದರಿಂದ ಸುಮಿತ್ ರ್‍ಯಾಂಕಿಂಗ್‌ನಲ್ಲಿ ಭಾರೀ ಪ್ರಗತಿ ಕಂಡುಬಂದಿತ್ತು. ಈ ಮೂಲಕ ಒಲಂಪಿಕ್ಸ್ ಟಿಕೆಟ್ ಕೂಡ ಗಿಟ್ಟಿಸಿಕೊಂಡಿದ್ದಾರೆ.
ವಯಸ್ಸು 40 ದಾಟಿದರೂ ಕೂಡ ಯುವ ಆಟಗಾರರು ಕೂಡ ನಾಚುವಂತ ಪ್ರದರ್ಶನ ತೋರುತ್ತಿರುವ ಕನ್ನಡಿಗ ಬೋಪಣ್ಣ ಕೂಡ ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ.

