ಲಂಡನ್ನ ಸೆಂಟರ್ ಕೋರ್ಟ್ ಅಂಗಳದಲ್ಲಿ ನಡೆದ ವಿಂಬಲ್ಡನ್ ಮಹಿಳಾ ಸಿಂಗಲ್ಸ್ ಫೈನಲ್ನಲ್ಲಿ ಜೆಕ್ ಗಣರಾಜ್ಯದ ಬಾರ್ಬೊರಾ ಕ್ರೆಚಿಕೋವಾ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಉತ್ತಮ ಹೋರಾಟಕ್ಕೆ ಸಾಕ್ಷಿಯಾಗಿದ್ದ ಈ ಪಂದ್ಯದಲ್ಲಿ ಇಟಲಿಯ ಜಾಸ್ಮಿನ್ ಪಾವೊಲಿನಿ ಅವರನ್ನು ಸೋಲಿಸಿ ಚೊಚ್ಚಲ ವಿಂಬಲ್ಡನ್ ಕಿರೀಟ ಮುಡಿಗೇರಿಸಿಕೊಂಡರು.
ದಿಟ್ಟ ಹೋರಾಟ ಪ್ರದರ್ಶಿಸಿದ ಜಾಸ್ಮಿನ್ ಪಾವೊಲಿನಿ ಬ್ಯಾಕ್ ಟು ಬ್ಯಾಕ್ ಪಾಯಿಂಟ್ಸ್ ಗಳಿಸಿದರೆ, ಬಾರ್ಬೊರಾ 2 ಅಂಕದಲ್ಲೇ ಉಳಿದರು. ಈ ಮೂಲಕ ಜಾಸ್ಮಿನ್ 2ನೇ ಸುತ್ತನ್ನು 6-2 ಅಂತರದಿಂದ ಗೆದ್ದುಕೊಂಡರು.
ಆದರೆ ಅಂತಿಮ ಸುತ್ತಿನಲ್ಲಿ ಚಾಣಾಕ್ಷ ಆಟದೊಂದಿಗೆ ಜಾಸ್ಮಿನ್ ಮೇಲೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. ಇದಾಗ್ಯೂ ಒಂದು ಹಂತದಲ್ಲಿ ಉಭಯರು 4-4 ಅಂತರದಿಂದ ಸಮಬಲ ಸಾಧಿಸಿದ್ದರಿಂದ ಪಂದ್ಯವು ರಣರೋಚಕ ಹೋರಾಟಕ್ಕೆ ಸಾಕ್ಷಿಯಾಯಿತು. ಆದರೆ ತಮ್ಮೆಲ್ಲಾ ಅನುಭವನ್ನು ಧಾರೆಯೆರೆದ ಬಾರ್ಬೊರಾ ಕ್ರೆಚಿಕೋವಾಗೆ ಅಂತಿಮವಾಗಿ 6-4 ಅಂತರದಿಂದ ಗೆಲ್ಲುವ ಮೂಲಕ ಚಾಂಪಿಯನ್ ಪಟ್ಟಕ್ಕೇರಿದರು.

