News Karnataka Kannada
Monday, May 06 2024
ಕ್ರೀಡೆ

ಆಸ್ಟ್ರೇಲಿಯ ತಂಡಕ್ಕೆ ಭಾರತದ ವಿರುದ್ಧ ರೋಚಕ ಜಯ

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಗಳ ಜಯ ಗಳಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ಹೆಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.
Photo Credit : News Kannada

ಗುವಾಹಟಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ 5 ವಿಕೆಟ್ ಗಳ ಜಯ ಗಳಿಸಿದೆ. ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಮ್ಯಾಥ್ಯೂ ಹೆಡ್ ಬೌಲಿಂಗ್ ಆಯ್ಕೆ ಮಾಡಿಕೊಂಡರು.

ಈ ಪಂದ್ಯ  ಅಸ್ಸಾಂ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ನಡೆಯಿತು. ಭಾರತ ನೀಡಿದ 223 ರನ್‌ ಗಳ ಗುರಿ ಬೆನ್ನುಹತ್ತಿದ ಆಸ್ಟ್ರೇಲಿಯ ಉತ್ತಮ ಆರಂಭ ಪಡೆಯಿತು. ಸ್ಪೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ ಟ್ರಾವೆಸ್‌ ಹೆಡ್‌ – ಆರೋನ್‌ ಹಾರ್ಡಿ ಜೋಡಿ ಭಾರತದ ಬೌಲರ್ಗ‌ಳ ಬೆವರಿಳಿಸಿದರು. ಆಸ್ಟ್ರೇಲಿಯ ತಂಡ 47 ರನ್‌ ಗಳಿಸಿದ್ದಾಗ ಆರೋನ್‌ ಹಾರ್ಡಿ ಅರ್ಶದೀಪ್‌ ಸಿಂಗ್‌ ಬೌಲಿಂಗ್‌ನಲ್ಲಿ ಇಶಾನ್‌ ಕಿಶನ್‌ ಗೆ ಕ್ಯಾಚಿತ್ತು ನಿರ್ಗಮಿಸಿದರು. ಎರಡನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ಬಂದ ಜೋಸ್‌ ಇಂಗ್ಲಿಸ್‌ 10 ರನ್‌ ಗಳಿಸಿ ರವಿ ಬಿಷ್ಣೋಯಿಗೆ ವಿಕೆಟ್‌ ಒಪ್ಪಿಸಿದರು.

ಕ್ರೀಸ್‌ ಗೆ ಬಂದ ಗ್ಲೆನ್‌ ಮ್ಯಾಕ್ಸ್‌ವೆಲ್‌ ಭಾರತ ತಂಡಕ್ಕೆ ಒತ್ತಡ ಹೇರುವಲ್ಲಿ ಯಶಸ್ವಿಯಾದರು. 48 ಎಸೆತ ಎದುರಿಸಿದ ಮ್ಯಾಕ್ಸ್‌ವೆಲ್‌ 8 ಬೌಂಡರಿ 8 ಸಿಕ್ಸರ್‌ ಗಳೊಂದಿಗೆ 104 ರನ್‌ ಗಳಿಸಿ ಅಜೇಯರಾಗಿ ಉಳಿದು ಆಸ್ಟ್ರೇಲಿಯ ತಂಡವನ್ನು ಗೆಲುವು ಸಾಧಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು