ಹ್ಯಾಂಗ್ಝೌ: ಏಷ್ಯನ್ ಗೇಮ್ಸ್ನಲ್ಲಿ ಇಂದು ಭಾರತ ಮುಟ್ಟಿದೆಲ್ಲ ಚಿನ್ನ ಎಂಬಂತೆ ಮೂರು ಚಿನ್ನದ ಪದಕ ಗೆದ್ದುಕೊಂಡಿದೆ. ಇದರಲ್ಲಿ ಎರಡು ಚಿನ್ನ ಆರ್ಚರಿಯಲ್ಲಿ ದಾಖಲಾದರೆ, ಮತ್ತೊಂದು ಚಿನ್ನ ಸ್ಕ್ವಾಷ್ನಲ್ಲಿ ಸಿಕ್ಕಿದೆ. ಮಧ್ಯಾಹ್ನ ನಡೆದ ಪುರಷರ ಆರ್ಚರಿ ತಂಡದ ಫೈನಲ್ನಲ್ಲಿ ಭಾರತದ ಓಜಸ್ ಡಿಯೋಟಾಲೆ, ಅಭಿಷೇಕ್ ವರ್ಮಾ ಮತ್ತು ಪ್ರಥಮೇಶ್ ಜಾವ್ಕರ್ ಅವರು ಕೊರಿಯಾವನ್ನು 230-235 ಅಂಕಗಳಿಂದ ಸೋಲಿಸಿ ಚಿನ್ನ ಗೆದ್ದರು. ಈ ಮೂಲಕ ಭಾರತದ ಚಿನ್ನದ ಪದಕ ಸಂಖ್ಯೆ 21ಕ್ಕೆ ಏರಿದೆ. ಮಹಿಳಾ ಹಾಕಿ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಚೀನಾ ವಿರುದ್ಧ 4-0 ಗೋಲ್ಗಳಿಂದ ಸೋತಿದೆ.
ಸ್ಕ್ವಾಷ್ ಮಿಕ್ಸೆಡ್ ಡಬಲ್ಸ್ನಲ್ಲಿ ದೀಪಿಕಾ ಪಳ್ಳಿಕಲ್ ಮತ್ತು ಹರಿಂದರ್ ಪಾಲ್ ಸಿಂಗ್ ಜೋಡಿ ಫೈನಲ್ನಲ್ಲಿ ಮಲೇಷ್ಯಾ ಜೋಡಿಯನ್ನು 2-0(11-10, 11-10) ಅಂತರದಿಂದ ಮಣಿಸಿ ಚಿನ್ನದ ಪದಕ್ಕೆ ಕೊರಳೊಡ್ಡಿದರು.
ಭಾರತ ಸದ್ಯ 21 ಚಿನ್ನ, 31 ಬೆಳ್ಳಿ, 32 ಕಂಚಿನ ಪದಕಗೊಂದಿಗೆ ಒಟ್ಟು 84 ಪದಕ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಕೆಲ ಸ್ಪರ್ಧೆಯಲ್ಲಿ ಭಾರತೀಯ ಕ್ರೀಡಾಪಟುಗಳು ಫೈನಲ್ ತಲುಪಿದ್ದು ಶತಕದ ಪದಕ ಗೆಲ್ಲುವ ವಿಶ್ವಾಸದಲ್ಲಿದ್ದಾರೆ.
The Joy of bringing home #Gold🥇🤩
Their faces say it all!
Presenting @archer_abhishek & #KheloIndiaAthletes Ojas and Prathamesh!
Congratulations on the Gold boys💪🏻👏🏻👏🏻 pic.twitter.com/7mXE1GXb5e
— SAI Media (@Media_SAI) October 5, 2023