News Karnataka Kannada
Monday, April 29 2024
ಕ್ರೀಡೆ

ಏಷ್ಯನ್ ಗೇಮ್ಸ್‌: ಪಿ.ಟಿ ಉಷಾ ರಾಷ್ಟ್ರೀಯ ದಾಖಲೆ ಸರಿಗಟ್ಟಿದ ವಿತ್ಯಾ

Asian Games 2018: Vithya equals PT Usha's national record
Photo Credit : News Kannada

ಹ್ಯಾಂಗ್‌ಝೌ: ಏಷ್ಯನ್ ಗೇಮ್ಸ್‌ನಲ್ಲಿ ಅಗೋಘ ಪ್ರದರ್ಶನ ತೋರುತ್ತಿರುವ ಭಾರತೀಯ ಕ್ರೀಡಾಪಟುಗಳು ಪದಕ ಬೇಟೆಯನ್ನು ಮುಂದುವರಿಸಿದ್ದಾರೆ. ಇದೇ ವೇಳೆ ಮಹಿಳೆಯರ 400 ಮೀಟರ್ ಹರ್ಡಲ್ಸ್‌ನಲ್ಲಿ ಭಾರತದ ವಿತ್ಯಾ ರಾಮರಾಜ್ ಅವರು ದಿಗ್ಗಜ ಮಾಜಿ ಓಟಗಾರ್ತಿ ಪಿ.ಟಿ ಉಷಾ ಅವರ 39 ವರ್ಷಗಳ ರಾಷ್ಟ್ರೀಯ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಫೈನಲ್ ಪ್ರವೇಶ ಪಡೆದಿರುವ ಅವರು ಪದಕವೊಂದರ ಮೇಲೆ ಚಿತ್ತ ನೆಟ್ಟಿದ್ದಾರೆ.

ಇಂದು ನಡೆದ ಮಹಿಳೆಯರ 400 ಮೀ ಹರ್ಡಲ್ಸ್‌ನಲ್ಲಿ, 25 ವರ್ಷದ ವಿತ್ಯಾ ತನ್ನ ಹೀಟ್‌ನಲ್ಲಿ ಮೊದಲ ಸ್ಥಾನ ಮತ್ತು ಒಟ್ಟಾರೆಯಾಗಿ 55.42 ಸೆಕೆಂಡ್‌ಗಳಲ್ಲಿ ವೈಯಕ್ತಿಕ ಅತ್ಯುತ್ತಮ ಸಮಯದೊಂದಿಗೆ ಎರಡನೇ ಸ್ಥಾನಗಳಿಸಿ ಫೈನಲ್‌ ಪ್ರವೇಶಿಸಿದ್ದಾರೆ. ಮಂಗಳವಾರ ಫೈನಲ್​ ನಡೆಯಲಿದೆ. ಉಳಿದಂತೆ ಜೆಸ್ಸಿ ಸಂದೇಶ್, ಮೊಹಮ್ಮದ್ ಅಫ್ಸಲ್ ಪುಲಿಕ್ಕಲಕತ್, ಮತ್ತು ಕೃಷ್ಣನ್ ಕುಮಾರ್ ಸೇರಿ ಹಲವು ಅಥ್ಲೀಟ್‌ಗಳು ತಮ್ಮ ಈವೆಂಟ್‌ಗಳಲ್ಲಿ ಗೆದ್ದು ಫೈನಲ್​ಗೆ ಲಗ್ಗೆಯಿಟ್ಟಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು