News Karnataka Kannada
Monday, April 29 2024
ಕ್ರೀಡೆ

ಏಷ್ಯನ್ ಗೇಮ್ಸ್ 2023 : ‘ಚಿನ್ನ’ಕ್ಕಾಗಿ‌ ಇಂದು ಭಾರತ-ಅಫ್ಘಾನ್ ಫೈಟ್

Asian Games 2023: India, Afghanistan to fight for gold today
Photo Credit : IANS

ಹ್ಯಾಂಗ್‌ಝೌ: ಏಷ್ಯನ್​ ಗೇಮ್ಸ್​-2023ರ ಪುರುಷರ ಕ್ರಿಕೆಟ್​ನ ಫೈನಲ್ ಪಂದ್ಯ ಇಂದು ನಡೆಯಲಿದ್ದು, ಭಾರತ ತಂಡ ಹಾಗೂ ಅಫ್ಘಾನಿಸ್ತಾನ ತಂಡ ಬಂಗಾರಕ್ಕಾಗಿ ಸೆಣಸಲಿವೆ.

ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಫೀಲ್ಡ್‌ನಲ್ಲಿ ಇಂದು ಬೆಳಗ್ಗೆ 10.30ಕ್ಕೆ ಫೈನಲ್ ಪಂದ್ಯ ನಡೆಯಲಿದ್ದು ಋತುರಾಜ್​​ ಸಾರಥ್ಯದ ಬ್ಲೂ ಬಾಯ್ಸ್​ ಚಿನ್ನದ ಪದಕ ಗೆಲ್ಲುವ ತವಕದಲ್ಲಿದ್ದಾರೆ. ಪಾಕಿಸ್ತಾನ ತಂಡವನ್ನೇ ಬಗ್ಗುಬಡಿದಿರುವ ಅಫ್ಘಾನಿಸ್ತಾನ ಭಾರತಕ್ಕೆ ಶಾಕ್​ ಕೊಡಲು ಸಿದ್ಧತೆ ನಡೆಸಿದೆ.

ಋತುರಾಜ್ ಬಳಗ ಪದಕ ಗೆಲ್ಲುವ ಫೇವರಿಟ್​ ಆಗಿದೆ. ಇನ್ನೂ ಇಂದಿನ ಪಂದ್ಯದಲ್ಲಿ ಸ್ಪಿನ್ನರ್ ಶಹಬಾಜ್​ ಅಹಮ್ಮದ್ ಸ್ಥಾನಕ್ಕೆ ವೇಗಿ ಅವೇಶ್​ ಖಾನ್​ ಕಣಕ್ಕಿಳಿಯುವ ಸಾಧ್ಯತೆಯಿದೆ. ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಫೈನಲ್ ಪಂದ್ಯವನ್ನು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು