ಬ್ಯಾಂಕಾಕ್: 2ನೇ ವಿಶ್ವ ಅರ್ಹತಾ ಪಂದ್ಯಾವಳಿಯಲ್ಲಿ ವಿಶ್ವ ಚಾಂಪಿಯನ್‌ಶಿಪ್ ಬೆಳ್ಳಿ ಪದಕ ವಿಜೇತ, ಭಾರತದ ಬಾಕ್ಸರ್ ಅಮಿತ್ ಪಂಘಲ್ ಅವರು ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್ ಗೇಮ್ಸ್ಗೆ ಅರ್ಹತೆ ಪಡೆದರು.
ಭಾನುವಾರ ನಡೆದ ಪುರುಷರ 51 ಕೆ.ಜಿ. ಸ್ಪರ್ಧೆಯಲ್ಲಿ ತಮ್ಮೆಲ್ಲಾ ಅನುಭವ ಬಳಸಿ ಬಾಕ್ಸಿಂಗ್ ರಿಂಗ್ಗಿಳಿದ ಅಮಿತ್ ಪಂಘಲ್ ಚೀನಾದ ಚುವಾಂಗ್ ಲಿಯು ವಿರುದ್ಧ 5-0 ಸರ್ವಾನುಮತದ ತೀರ್ಪಿನಲ್ಲಿ ಗೆದ್ದು ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿಕೊಂಡರು.ಈ ಮೂಲಕ ಭಾರತದಿಂದ 5 ಬಾಕ್ಸರ್ಗಳು ಒಲಿಂಪಿಕ್ಸ್ ಕೋಟಾ ಸಂಪಾದಿಸಿದಂತಾಗಿದೆ.

