News Karnataka Kannada
Monday, April 29 2024
ಕ್ರೀಡೆ

5ನೇ ಸಲ ವಿಶ್ವಕಪ್ ಗೆದ್ದ ಜೂನಿಯರ್ ಟೀಂ ಇಂಡಿಯಾ

Under 19 Match
Photo Credit : News Kannada

ಆಯಂಟಿಗಾ: ಅಂಡರ್ 19 ವಿಶ್ವಕಪ್ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಭಾರತ 5 ನೇ ಬಾರಿಗೆ ವಿಶ್ವಕಪ್ ಜಯಿಸಿದೆ.

ಇಂಗ್ಲೆಂಡ್ ತಂಡ 44.5 ಓವರ್ ಗಳಲ್ಲಿ 189 ರನ್ ಗಳಿಸಿದರೆ, ಭಾರತ ಈ ಗುರಿಯನ್ನು 47.4 ಓವರ್ ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಲುಪಿತು. ಈ ಮೂಲಕ ಮತ್ತೊಂದು ಕಪ್ ಗೆದ್ದುಕೊಂಡಿತು.

ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಶೋಚನೀಯ ಆರಂಭ ಪಡೆಯಿತು. ಭಾರತದ ಬೌಲರ್ ಗಳ ದಾಳಿಗೆ ಕುಸಿದ ಆಂಗ್ಲರು, ಕೇವಲ 47 ರನ್ ಗೆ ಐದು ವಿಕೆಟ್ ಕಳೆದುಕೊಂಡಿದ್ದರು. ನಂತರ ತಂಡವನ್ನು ಆಧರಿಸಿದ ಜೇಮ್ಸ್ 95 ರನ್ ಗಳಿಸಿದರು. ಜೇಮ್ಸ್ ಸೇಲ್ಸ್ ಅಜೇಯ 34 ರನ್ ಗಳಿಸಿದರು. ಇವರಿಬ್ಬರ ನೆರವಿನಿಂದ ಇಂಗ್ಲೆಂಡ್ ತಂಡ 150 ರ ಗಡಿ ತಲುಪಿತು.

ಭಾರತದ ಪರ ಮಾರಕ ದಾಳಿ ಸಂಘಟಿಸಿದ ರಾಜ್ ಬಾವ ಐದು ವಿಕೆಟ್ ಕಿತ್ತರೆ, ರವಿ ಕುಮಾರ್ ನಾಲ್ಕು ವಿಕೆಟ್ ಕಿತ್ತರು. ಒಂದು ವಿಕೆಟ್ ಕೌಶಲ್ ತಾಂಬೆ ಪಾಲಾಯಿತು.

ಗುರಿ ಬೆನ್ನತ್ತಿದ ಭಾರತ ತಂಡ ಆರಂಭದಲ್ಲೇ ರಘುವಂಶಿ ವಿಕೆಟ್ ಕಳೆದುಕೊಂಡಿತು. ನಂತರ ಶೇಕ್ ರಶೀದ್, ನಿಶಾಂತ್ ಸಿಂಧು ಅರ್ಧಶತಕದ ನೆರವಿನಿಂದ ಗುರಿ ಬೆನ್ನತ್ತಿತು. ಇಬ್ಬರೂ ತಲಾ 50 ರನ್ ಗಳಿಸಿದರು. ಆಲ್ ರೌಂಡ್ ಪ್ರದರ್ಶನ ನೀಡಿದ ರಾಜ್ ಬಾವಾ 35 ರನ್ ಗಳಿಸಿದರು. ಕೊನೆಯಲ್ಲಿ ದಿನೇಶ್ ಬಾನಾ ಭರ್ಜರಿ ಸಿಕ್ಸರ್ ಮೂಲಕ ತಂಡಕ್ಕೆ ಜಯ ತಂದಿತ್ತರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು