Categories: ಕ್ರೀಡೆ

28 ಎಸೆತದಲ್ಲಿ ಅರ್ಧಶತಕ ಪೂರೈಸಿ ಕಪಿಲ್ ದೇವ್ ದಾಖಲೆ ಮುರಿದ ರಿಷಬ್ ಪಂತ್

ಬೆಂಗಳೂರು : ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ 2ನೇ ಟೆಸ್ಟ್‌ ಪಂದ್ಯದ ಎರಡನೇ ದಿನದಂದು ರಿಷಬ್ ಪಂತ್ ಕೇವಲ 28 ಎಸೆತಗಳಲ್ಲಿ ಅರ್ಧಶತಕ ಪೂರೈಸುವ ಮೂಲಕ ಟೆಸ್ಟ್ ಕ್ರಿಕೆಟ್ ನಲ್ಲಿ ಅತಿ ವೇಗವಾಗಿ ಅರ್ಧಶತಕ ಗಳಿಸಿದ ಭಾರತೀಯ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.

ದಿನದ ಆರಂಭದಲ್ಲಿ ಶ್ರೀಲಂಕಾವನ್ನು 109 ರನ್‌ಗಳಿಗೆ ಆಲೌಟ್ ಮಾಡಿದ ನಂತರ ಭಾರತ ತಂಡವು ಎರಡನೇ ಇನಿಂಗ್ಸ್ ವೇಗವಾಗಿ ರನ್ ಗಳಿಸಲು ಮುಂದಾಯಿತು.ಇದೇ ವೇಳೆ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಆರಂಭಿಸಿದ ರಿಷಬ್ ಪಂತ್ ಕೇವಲ 31 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಗಳ ನೆರವಿನಿಂದ 50 ರನ್ ಗಳಿಸಿ ವಿಕೆಟ್ ಒಪ್ಪಿಸುವ ಮೊದಲು ಅವರು ಅತಿ ವೇಗದ ಅರ್ಧ ಶತಕ ಪೂರೈಸಿದ ದಾಖಲೆಗೆ ಕಾರಣಕರ್ತರಾದರು. ಅವರು ಅರ್ಧ ಶತಕವನ್ನು ಗಳಿಸಿದಾಗ ಕೇವಲ 28 ಎಸೆತಗಳನ್ನು ಎದುರಿಸಿದ್ದರು.

ಪಂತ್ ವೇಗವಾಗಿ ಅರ್ಧಶತಕವನ್ನು ಗಳಿಸುವ ಮೂಲಕ ಕಪಿಲ್ ದೇವ್ ಅವರ ಸುಮಾರು 40 ವರ್ಷಗಳ ಟೆಸ್ಟ್ ದಾಖಲೆಯನ್ನು ಮುರಿದರು.1982 ರ ಕರಾಚಿ ಟೆಸ್ಟ್‌ನಲ್ಲಿ ಪಾಕಿಸ್ತಾನದ ವಿರುದ್ಧ ಕಪಿಲ್ ದೇವ್ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.ಆದಾಗ್ಯೂ ಆ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನವು ಇನ್ನಿಂಗ್ಸ್ ಸಹಿತ 86 ರನ್‌ಗಳಿಂದ ಗೆದ್ದುಕೊಂಡಿತು.

Gayathri SG

Recent Posts

ವಿವಾದಾತ್ಮಕ ಹೇಳಿಕೆ : ಶಾಸಕ ರಾಜು ಕಾಗೆಗೆ ಚುನಾವಣಾ ಇಲಾಖೆ ನೋಟಿಸ್‌

ವಿವಾದಾತ್ಮಕ ಹೇಳಿಕೆ ಹಿನ್ನಲೆ ಕಾಗವಾಡ ಕಾಂಗ್ರೆಸ್ ಶಾಸಕ ರಾಜು ಕಾಗೆಗೆ ಚುನಾವಣಾ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ನಿನ್ನೆ(ಏ.30) ಪ್ರಿಯಾಂಕಾ ಜಾರಕಿಹೊಳಿ‌…

5 hours ago

ಕಾರ್ತಿಕ್​ ಜಯರಾಮ್​ ಹುಟ್ಟುಹಬ್ಬ ಪ್ರಯುಕ್ತ ‘ದಿ ವೀರ್​’​ ಪೋಸ್ಟರ್ ಔಟ್‌

ಸ್ಯಾಂಡಲ್​ವುಡ್​ನ ಖ್ಯಾತ ನಟ ಕಾರ್ತಿಕ್​ ಜಯರಾಮ್​ ಅಲಿಯಾಸ್​ ಜೆಕೆ ಅವರು ಇಂದು (ಮೇ 1) ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

5 hours ago

ಕೊಳೆತ ಸ್ಥತಿಯಲ್ಲಿ ಮಹಿಳೆ ಮೃತ ದೇಹ ಪತ್ತೆ

ಮಹಿಳೆಯನ್ನು ಕೊಲೆ ಮಾಡಿರುವ ದುಷ್ಕರ್ಮಿಗಳು ಮೃತದೇಹ ಗುರುತು ಪತ್ತೆಯಾಗದಂತೆ ಬೆಂಕಿ ಹಚ್ಚಿ ಅರಣ್ಯದಲ್ಲಿ ಹಾಕಿ ಹೋಗಿರುವ ಪ್ರಕರಣ ತಾಲ್ಲೂಕಿನ ತೂಬಗೆರೆ…

6 hours ago

ವಿಜಯ ಸಂಕಲ್ಪ ಸಮಾವೇಶಕ್ಕೆ ಆಗಮಿಸಿದ ಅಮೀತ್ ಶಾಗೆ ಅದ್ದೂರಿ ಸ್ವಾಗತ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಪರವಾಗಿ ಪ್ರಚಾರಕ್ಕೆ ಬಂದ ಕೇಂದ್ರ ಗೃಹ ಮಂತ್ರಿ ಅಮೀತ್ ಶಾ ಅವರು ವಿಜಯ…

6 hours ago

ಫಾಲ್ಕೆ ಫಿಲ್ಮ್​ ಫೆಸ್ಟಿವಲ್​ನಲ್ಲಿ ಪ್ರಶಸ್ತಿ ಪಡೆದ ‘ಕೆಂಡ’ ನಿರ್ದೇಶಕ ಸಹದೇವ್ ಕೆಲವಡಿ

ಕೆಂಡ’ ಸಿನಿಮಾ ಬಿಡುಗಡೆಗೂ ಮುನ್ನವೇ ಬಾರಿ ಸದ್ದು ಮಾಡುತ್ತಿದ್ದೆ. ಸಿನಿಮಾ ನಿರ್ದೇಶನ ಮಾಡಿರುವ ನಿರ್ದೇಶಕ ಸಹದೇವ್ ಕೆಲವಡಿ ಅವರಿಗೆ ಸಿನಿಮಾ…

6 hours ago

ಕಾಂಗ್ರೆಸ್ ಶಾಸಕನದ್ದು ಎನ್ನಲಾದ ಮತ್ತೊಂದು ಅಶ್ಲೀಲವಿಡಿಯೋ ವೈರಲ್‌

ಹಾಸನದ ಅಶ್ಲೀಲ ವಿಡಿಯೋ ಪ್ರಕರಣ ಬೆನ್ನಲ್ಲೇ ಇದೀಗ ಮತ್ತೊರ್ವ ಶಾಸಕನ ವಿಡಿಯೋ ವೈರಲ್‌ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್‌ ಶಾಸಕರದ್ದು ಎನ್ನಲಾದ…

7 hours ago