ನಗೋಯಾ: 2026ರ ಏಷ್ಯನ್ ಕ್ರೀಡಾಕೂಟದಲ್ಲಿ ಗಾಲ್ಫ್‌ನಲ್ಲಿ ಮೈಸೂರಿನ ಪ್ರಣವಿ ಅರಸ್‌ ಅವರು ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದಾರೆ.

ಜಪಾನ್‌ನ ಐಚಿ-ನಗೋಯಾದಲ್ಲಿ ನಡೆದ ಕ್ರೀಡಾಕೂಟದ 14ನೇ ದಿನದಂದು ಅವರ ಈ ಎರಡು ಪದಕಗಳ ಸಾಧನೆಯು ಭಾರತಕ್ಕೆ ಅತ್ಯಂತ ರೋಚಕ ಕ್ಷಣವಾಗಿದೆ.

ನಾಲ್ಕನೇ ದಿನದ ಆಟದಲ್ಲಿ ‘ಈವನ್ ಪಾರ್’ (even par) ಸಾಧಿಸಿದ ಅವರು, ಒಟ್ಟಾರೆಯಾಗಿ ’15-ಅಂಡರ್ 265′ ಸ್ಕೋರ್‌ನೊಂದಿಗೆ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡರು.

ಅದಿತಿ ಅಶೋಕ್ ‘2-ಓವರ್ 282′ ಸ್ಕೋರ್‌ನೊಂದಿಗೆ 14ನೇ ಸ್ಥಾನ ಪಡೆದರೆ, ದೀಕ್ಷಾ ದಗಾರ್ ’12-ಓವರ್ 292’ ಸ್ಕೋರ್‌ನೊಂದಿಗೆ ಜಂಟಿ 23ನೇ ಸ್ಥಾನದಲ್ಲಿ ಅಭಿಯಾನ ಮುಕ್ತಾಯಗೊಳಿಸಿದರು.