Bengaluru 22°C
Ad

20 ವಿಶ್ವಕಪ್ ಅಭ್ಯಾಸ ಪಂದ್ಯ: ಭಾರತಕ್ಕೆ 60 ರನ್​ಗಳ ಭರ್ಜರಿ ಜಯ

ಭಾರತ ತಂಡವು ನಿನ್ನೆಯ ದಿನ ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ  ನಡೆದ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ  ವಿರುದ್ಧ 60 ರನ್​ಗಳ ಬೃಹತ್ ಜಯ ದಾಖಲಿಸಿದೆ.

ಭಾರತ ತಂಡವು ನಿನ್ನೆಯ ದಿನ  ನ್ಯೂಯಾರ್ಕ್​ನ ನಸ್ಸೌ ಕೌಂಟಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ  ನಡೆದ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ  ವಿರುದ್ಧ 60 ರನ್​ಗಳ ಬೃಹತ್ ಜಯ ದಾಖಲಿಸಿದೆ.

Ad
300x250 2

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 20 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು 182 ರನ್ ಗಳಿಸಿತು.

ತಂಡದ ಪರವಾಗಿ ರಿಷಬ್ ಪಂತ್ ಅರ್ಧಶತಕ ಸಿಡಿಸಿದರೆ, ಉಪನಾಯಕ ಹಾರ್ದಿಕ್ ಪಾಂಡ್ಯ 40 ಹಾಗೂ ಸೂರ್ಯಕುಮಾರ್ ಯಾದವ್ 31 ರನ್​ಗಳ ಕೊಡುಗೆ ನೀಡಿದರು. ಉತ್ತರವಾಗಿ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ತಂಡ 20 ಓವರ್‌ಗಳಲ್ಲಿ 9 ವಿಕೆಟ್‌ ಕಳೆದುಕೊಂಡು 121 ರನ್ ಗಳಿಸಲಷ್ಟೇ ಶಕ್ತವಾಯಿತು.

183 ರನ್​ಗಳ ಗುರಿ ಬೆನ್ನು ಹತ್ತಿದ್ದ ಬಾಂಗ್ಲಾದೇಶ 20 ಓವರ್​ನಲ್ಲಿ 9 ವಿಕೆಟ್ ಕಳೆದುಕೊಂಡು 122 ರನ್​ಗಳಿಸಿ ಸೋಲಿಗೆ ಶರಣಾಯ್ತು. ಬೌಲಿಂಗ್​ನಲ್ಲಿ ಅರ್ಷ್​​ದೀಪ್ ಸಿಂಗ್, ಶಿವಂ ದುಬೆ ತಲಾ ಎರಡು ವಿಕೆಟ್ ಪಡೆದು ಮಿಂಚಿದರು. ಅಕ್ಸರ್ ಪಟೇಲ್, ಬೂಮ್ರಾ, ಸಿರಾಜ್, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು.

Ad
Ad
Nk Channel Final 21 09 2023
Ad