ಐಪಿಎಲ್ ಪಂದ್ಯಾವಳಿಗೆ ದಿನಗಣನೆ ಆರಂಭವಾಗಿದೆ. ಮಾರ್ಚ್ 26ರಂದು ಟೂರ್ನಿಗೆ ಮುಂಬೈನಲ್ಲಿ ವಿದ್ಯುಕ್ತ ಚಾಲನೆ ಸಿಗಲಿದೆ. ಈಗಾಗಲೇ ಎಲ್ಲಾ ತಂಗಳು ಟೂರ್ನಿಗೆ ಸಿದ್ದತೆಯಲ್ಲಿತೊಡಗಿವೆ. ಹಾಲಿ ಚಾಂಪಿಯನ್ ಸಿಎಸ್ಕೆ ತಂಡವು ಕಪ್ ತನ್ನಲ್ಲಿಯೇ ಉಳಿಸಿಕೊಳ್ಳುವ ಗುರಿಯೊಂದಿಗೆ ಸೂರತ್ನಲ್ಲಿ ಭರ್ಜರಿ ಅಭ್ಯಾಸ ನಡೆಸುತ್ತಿದೆ.
ಈ ನಡುವೆ ಧೋನಿ ಕ್ಯಾಂಪ್ ನಲ್ಲಿ ಅಂಡರ್ 19 ಆಟಗಾರನೊಬ್ಬ ಕಾಣಿಸಿಕೊಂಡಿದ್ದಾನೆ. ಈ ಬಾರಿಯ ಐಪಿಎಲ್ನಲ್ಲಿ ಹರಾಜಾಗದ ಹರಿಯಾಣದ ವಿಕೆಟ್ಕೀಪರ್-ಬ್ಯಾಟ್ಸ್ಮನ್ ದಿನೇಶ್ ಬನಾ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಕಿಂಗ್ಸ್ ನೆಟ್ ವಿಕೆಟ್ ಕೀಪರ್ ಆಗಿ ಅಭ್ಯಾಸ ಕ್ಯಾಂಪ್ಗೆ ಕರೆಸಿಕೊಂಡಿದೆ.
ಇತ್ತೀಚೆಗೆ ನಡೆದ ಅಂಡರ್-19 ವಿಶ್ವಕಪ್ನಲ್ಲಿ ಭಾರತ ಆಡಿದ್ದ ದಿನೇಶ್ ಬಾನಾ ಅದ್ಭುತವಾಗಿ ಆಡಿದ್ದರು. ಹಾಗಿದ್ದರೂ ಅವರಿಗೆ ಐಪಿಎಲ್ನಲ್ಲಿ ಅವಕಾಶ ಸಿಕ್ಕಿರಲಿಲ್ಲ. ಒಂದೂ ಪ್ರಥಮ ದರ್ಜೆ ಅಥವಾ ಲೀಸ್ಟ್ ಎ ಪಂದ್ಯವಾಡದ ಹಿನ್ನೆಲೆಯಲ್ಲಿ ಅವರಿಗೆ ಐಪಿಎಲ್ ನಿಯಮಾವಳಿಗಳ ಪ್ರಕಾರ ಹರಾಜಿನಲ್ಲಿ ಪಾಲ್ಕೊಳ್ಳುವ ಅವಕಾಶ ಸಿಕ್ಕಿರಲಿಲ್ಲ.
ಇದೀಗ ಸಿಎಸ್ಕೆ ತಂಡವು ನೆಟ್ ವಿಕೆಟ್ ಕೀಪರ್ ಆಗಿ ದಿನೇಶ್ ಬಾನಾ ಅವರನ್ನು ಆಯ್ಕೆ ಮಾಡಿಕೊಂಡಿದೆ. ಬನಾ ಪವರ್ ಹಿಟ್ಟರ್ ಆಗಿ ಗುರುತಿಸಿಕೊಂಡಿದ್ದಾರೆ. ವಿಶ್ವಕಪ್ ನಲ್ಲಿ ಅವರ ಸ್ಟ್ರೈಕ್ ರೇಟ್ 190ಕ್ಕಿಂತ ಹೆಚ್ಚಿತ್ತು.