ನವದೆಹಲಿ : ಸದಾ ಒಂದಲ್ಲ ಒಂದು ರೀತಿಯ ವಿಷಯಗಳಿಂದ ಸುದ್ದಿಯಲ್ಲಿರುವ ಇಂಡಿಯನ್ ಕ್ರಿಕೆಟ್ ಟೀಮಿನ ಮಾಜಿ ನಾಯಕ ಎಂಎಸ್ ಧೋನಿ ಇದೀಗ ಮತ್ತೆ ಒಂದು ಫೋಟೋ ಮೂಲಕ ಸುದ್ದಿ ಮಾಡುತ್ತಿದ್ದಾರೆ.
ವಿವಿಧ ರೀತಿಯ ಮೇಕೋವೋರ್’ಗಳಿಂದ ಅಭಿಮಾನಿಗಳಿಗೆ ಹತ್ತಿರವಾಗಿರುವ ಧೋನಿ, ಸದ್ಯ ಕಾಡಿನ ನಡುವೆ ಸನ್ಯಾಸಿಯಂತೆ ವೇಷ ಧರಿಸಿದ ಪೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ . ಸ್ಟಾರ್ ಸ್ಪೋರ್ಟ್ಸ್ ಈ ಫೋಟೋವನ್ನು ಹಂಚಿಕೊಂಡಿದ್ದು , ಯಾವ ಕಾರಣಕ್ಕೆ ಮೇಕೋವರ್ ಮಾಡಿದ್ದಾರೆ ಎಂದು ಬಹಿರಂಗಪಡಿಸಿಲ್ಲ .
ಈ ಬಾರಿಯ ಐಪಿಎಲ್’ನ ಜಾಹೀರಾತಿಗಾಗಿ ತೆಗೆದ ಫೋಟೋ ಎಂದು ಎಲ್ಲಡೆ ಸುದ್ದಿ ಹರಡುತ್ತಿದೆ . ಸದ್ಯ ಧೋನಿ ಸನ್ಯಾಸಿಯಾದ ಫೋಟೋ ತೀವ್ರ ಕುತೂಹಲ ಮೂಡಿಸಿದ್ದು , ಸಾಮಾಜಿಕ ಜಾಲತಾಣದಲ್ಲಿ ಬಹುತೇಕರ ಚರ್ಚೆಯ ವಿಷಯವಾಗಿ ಮಾರ್ಪಾಡಾಗಿದೆ.